ಅಪಘಾತದಲ್ಲಿ ಗಾಯಗೊಂಡು ಮೇ.೨೬ ರಂದು ನಿಧನರಾದ ಮೇನಾಲದ ವಿಷ್ಣುರಾಜ್ ಎಂ.ಬಿ. ಅವರಿಗೆ ಶ್ರದ್ಧಾಂಜಲಿ ಸಭೆಯು ಜೂ.೫ ರಂದು ಸುಳ್ಯದ ರಾಘವೇಂದ್ರ ಮಠದಲ್ಲಿ ನಡೆಯಿತು.
ಮೃತರ ಬಗ್ಗೆ ಸುರೇಶ್ ಕಣೆಮರಡ್ಕ ಮತ್ತು ಜನಾರ್ದನ ಕಣಕ್ಕೂರುರವರು ನುಡಿನಮನ ಗೈದರು.
ವೇದಿಕೆಯಲ್ಲಿ ಪ್ರಸಾದ್ ರೈ ಮೇನಾಲ, ಪೂರ್ಣಚಂದ್ರ ಕಣೆಮರಡ್ಕ, ಕೃಷ್ಣ ಮಣಿಯಾಣಿ ಮೇನಾಲ, ಕರುಣಾಕರ ಹಾಸ್ಪಾರೆ, ಸುಭೋದ್ ಶೆಟ್ಟಿ ಮೇನಾಲ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.