ಸುಳ್ಯ ಮೊಗರ್ಪಣೆ ಇದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಅಧೀನದಲ್ಲಿ ನೂತನವಾಗಿ ಆರಂಭಗೊಂಡಿರುವ ಎಕ್ಸ್ಲೆಂಟ್ ಶೀ ಕ್ಯಾಂಪಸ್ ಜೂನ್ 5 ರಂದು ಮೊಗರ್ಪಣೆ ಮಸೀದಿ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಕ್ಯಾಂಪಸ್ ಅನ್ನು ಜಮಾಹತ್ ಕಮಿಟಿಯ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಫುಡ್ ಉದ್ಘಾಟನೆ ಮಾಡಿದರು.
ಸಂಸ್ಥೆಯ ಪ್ರಾಂಶುಪಾಲ ಹಾಫಿಲ್ ಸೌಕತ್ ಅಲಿ ಸಕಾಫಿ ವಾಸ್ತವಿಕ ಮಾತನಾಡಿ
ವಿದ್ಯಾರ್ಥಿಗಳಿಗೆ ಶರೀಹತ್ ವಿದ್ಯಾಭ್ಯಾಸದೊಂದಿಗೆ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಾಣಿಜ್ಯ ಮತ್ತು ಕಲಾ ವಿಭಾಗದ ತರಬೇತಿಯನ್ನು ಇಲ್ಲಿ ನೀಡಲಾಗುವುದು.
ಪ್ರಥಮ ವಾಗಿ ಆರಂಭಗೊಳ್ಳುತ್ತಿರುವ ನಮ್ಮ ಈ ಸಂಸ್ಥೆಗೆ ಈಗಾಗಲೇ 27 ಮಂದಿ ವಿದ್ಯಾರ್ಥಿನಿಗಳು ದಾಖಲಾತಿಯನ್ನು ಪಡೆದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವ ಸಂಭವವಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕೋಶಾಧಿಕಾರಿ ಮಹಮ್ಮದ್ ಆದರ್ಶ, ಉಪಾಧ್ಯಕ್ಷರುಗಳಾದ ಹಾಜಿ ಹೆಚ್ ಎ ಉಮ್ಮರ್, ಸಿಎಂ ಉಸ್ಮಾನ್, ಕಾರ್ಯದರ್ಶಿ ಎಸ್ ವೈ ಅಬ್ದುರ್ರಹ್ಮಾನ್, ಹಿರಿಯರಾದ ಎಸ್ ಎ ಎಸ್ ಮಹಮ್ಮದ್, ಹಾಗೂ ಮದರಸ ಅಧ್ಯಾಪಕರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜಮಾಅತ್ ಕಮಿಟಿ ಸದಸ್ಯರು, ಊರವರು, ಮದ್ರಸ ವಿದ್ಯಾರ್ಥಿಗಳು, ಮುತಅಲ್ಲಿಮ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಾಜಿ ಎಚ್ ಎ ಉಮ್ಮರ್ ಸ್ವಾಗತಿಸಿ ವಂದಿಸಿದರು.