ಅನನ್ಯಳ ಕಾಯಿಲೆ ವಾಸಿಗೆ ಬೇಕಿದೆ ನೆರವಿನ ಹಸ್ತ
ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿ ಎಂಬಲ್ಲಿ ವಾಸ್ತವ್ಯ ಹೊಂದಿರುವ ಬಡ ಪರಿಶಿಷ್ಟ ಮುಗೇರ ಸಮುದಾಯದ ವಸಂತ ಮತ್ತು ಸೀತು ದಂಪತಿಗಳ ಮಗಳು 8 ವರ್ಷ ಪ್ರಾಯದ ಅನನ್ಯ ರಕ್ತ ಕ್ಯಾನ್ಸರ್ ನಿಂದ ಬಳಲುತಿರುವ ನತದೃಷ್ಟ ಬಾಲಕಿ.
ಈ ಪುಟ್ಟ ಬಾಲಕಿಗೆ ಅನಾರೋಗ್ಯ ಕಾಡಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ರಕ್ತ ಕ್ಯಾನ್ಸರ್,ಎಂಬ ವರದಿ ಬಂದಿದೆ. ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ತಿಂಗಳ ಚಿಕಿತ್ಸೆ ಪಡೆದಿರುತ್ತಾರೆ. ಈಗಾಗಲೇ ಹಣ ಇಲ್ಲದೆ ಬಡ ದಂಪತಿಗಳು ಕಾಡಿ ಬೇಡಿ, ಕೈಸಾಲಮಾಡಿ ಅಂದಾಜು 2 ಲಕ್ಷ ಖರ್ಚು ಮಾಡಿರುತ್ತಾರೆ.
ವೈದ್ಯರ ಸೂಚನೆಯಂತೆ, ಇನ್ನೂ ಹೆಚ್ಚಿನ ಚಿಕಿತ್ಸೆ ವೆಚ್ಚ ಬೇಕಾಗಿದೆ. ದಂಪತಿಗಳಿಗೆ ಕೂಲಿ ಕೆಲಸಕ್ಕೆ ಹೋಗಿ ಜೀವನ. ಈಗ ಜೀವನದೊಂದಿಗೆ ಜೀವದ ಚಿಂತೆ. ಬಾಳುಗೋಡಿನ ಬೆಟ್ಟುಮಕ್ಕಿಯಲ್ಲಿ 5 ಸೆಂಟ್ಸ್ ಜಾಗ. ಮೂಲಭೂತ ಸೌಕರ್ಯಗಳೆ ಸರಿಯಾಗಿ ತಲುಪಿಲ್ಲ. ಇನ್ನು ಚಿಕತ್ಸೆ ವೆಚ್ಚ ದೇವರೇ ಮಾಡಬೇಕು.
ಅನನ್ಯ ಬಾಳುಗೋಡು ಸರ್ಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿನಿ. ಕಳೆದ ಕೆಲ ತಿಂಗಳಿನಿಂದ ಆಗಾಗ ಜ್ವರ ಕಾಣಿಸಿಕೊಳ್ಳುತಿದ್ದು, ಸಂದುನೋವು ಕೂಡ ಇತ್ತು. ಸ್ಥಳೀಯವಾಗಿ ಚಿಕಿತ್ಸೆ ಕೊಡುತಿದ್ದರೂ ಜ್ವರ ಕಡಿಮೆಯಿಲ್ಲ. ಎರಡು ತಿಂಗಳ ಹಿಂದೆ ಜ್ವರ ಉಲ್ಬಣಿಸಿ ವಾಂತಿ ಮಾಡಿಕೊಂಡಿದ್ದಳು. ಆ ಸಂದರ್ಭ ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಕೊಡಿಸಬೇಕೆಂದಿದ್ದರು. ಹಾಗೇ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ್ದು ಹೆಚ್ಚಿನ ಪರೀಕ್ಷೆಗೆ ತಿಳಿಸಿದ್ದರು. ಪರೀಕ್ಷಿಸುದಾಗ ರಕ್ತ ಕ್ಯಾನ್ಸರ್ ಇರುವುದು ಗೊತ್ತಾಗಿದೆ. 20 ದಿನಗಳ ಚಿಕಿತ್ಸೆ ಪಡೆದು ಪುತ್ತೂರಿನ ಬಂಧುಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಪುಟ್ಟ ಬಾಲಕಿಯ ಚಿಕಿತ್ಸೆ ಮುಂದುವರೆಸಲು ಹಣ ಬೇಕಾಗಿದೆ. ಬಾಲೆಯ ಬಾಳಿಗೆ ಸಹೃದಯಿಗಳು,ಸಮಾಜ ಬಾಂಧವರು ಕೈಲಾದಷ್ಟು ಧನಸಹಾಯ ನೀಡಿ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸುಬ್ರಹ್ಮಣ್ಯ ಶಾಖೆ
.ಬ್ಯಾಂಕ್ ಖಾತೆ
ಅನನ್ಯ ಬಿ.ವಿ, D/O ವಸಂತ ಬಿ
A/C No.39692743675
ಐ ಎಫ್ ಎಸ್ ಸಿ : SBIN0040951
ಇದಕ್ಕೆ
ಹಣ ಹಾಕಬೇಕು ಎಂದು ಕೇಳಿಕೊಳ್ಳಲಾಗಿದೆ.