ಹರಿಹರ ಪಲ್ಲತ್ತಡ್ಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕಿಶೋರಿಯರಿಗೆ ಋತುಸ್ರಾವ ನೈರ್ಮಲ್ಯದ ನಿರ್ವಹಣೆ ಕಾರ್ಯಕ್ರಮ ನೆಡಸಲಾಯಿತು .
ಸಭೆಯ ಅಧ್ಯಕ್ಷತೆಯನ್ನು ಹರಿಹರ ಗ್ರಾಮ ಪಂಚಾಯತ್ ಒಕ್ಕೂಟದ ಎಂ ಬಿ ಕೆ ಆಗಿರುವ ಶ್ರೀಮತಿ ವೇದಾವತಿರವರು ವಹಿಸಿದರು. ಸಮುದಾಯ ಆರೋಗ್ಯಾಧಿಕಾರಿ ಕುಮಾರಿ ರೇಣುಕಾರವರು ಋತುಸ್ರಾವ ನೈರ್ಮಲ್ಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಕಾರ್ಯಕರ್ತೆಯವರಾದ ಶ್ರೀಮತಿ ಪುಷ್ಪಾವತಿ ಋತುಸ್ರಾವ ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿದರು . ಹರಿಹರ ಪಲ್ಲತ್ತಡ್ಕ ಒಕ್ಕೂಟದ ಸಂಪನ್ಮೂಲ ಕಾರ್ಯಕರ್ತೆ ಶ್ರೀಮತಿ ದಿವ್ಯಾ, ಕಿಶೋರಿಯವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದಿಸಿದರು. ಕುಮಾರಿ ಲಿಖಿತ ಪ್ರಾರ್ಥಿಸಿದರು.