ಸುಳ್ಯ ತಾಲೂಕು ಭಜನಾ ಪರಿಷತ್ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ವಳಲಂಬೆ ಯಲ್ಲಿ ಭಜನೋತ್ಸವ ಕಾರ್ಯಕ್ರಮ

ಸುಳ್ಯ ತಾಲೂಕು ಭಜನಾ ಪರಿಷತ್ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಜನೋತ್ಸವ ಸಮಿತಿ ವಳಲಂಬೆ ಹಾಗೂ ಸುಳ್ಯ ತಾಲೂಕು ಭಜನಾ ಮಂಡಳಿಯ ಸಹಯೋಗ ದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಧಾರ್ಮಿಕ ಸಭಾಭವನದಲ್ಲಿ ಜೂ.26 ರಂದು ನಡೆಯಲಿರುವ ಭಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಜೂ.5 ರಂದು ಸುಳ್ಯ ಯೋಜನಾಧಿಕಾರಿ ಕಛೇರಿ ಸಭಾಭವನದಲ್ಲಿ ನಡೆಯಿತು.


ಭಜನಾ ಪರಿಷತ್ ರಾಜ್ಯಾ ಧ್ಯಕ್ಷ ಬಾಲಕೃಷ್ಣ ಪುತ್ಯ
ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಭಜನೋತ್ಸವ ಸಮಿತಿ ಅಧ್ಯಕ್ಷ ಕೇಶವ ಹೊಸೊಳಿಕೆ, ಯೋಜನಾಧಿಕಾರಿ ನಾಗೇಶ್ ಪಿ, ಪರಿಷತ್ ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ, ಕಾರ್ಯದರ್ಶಿ ಯತೀಶ್ ರೈ ದುಗಲಡ್ಕ ಉಪಸ್ಥಿತರಿದ್ದರು.
ಜೂ.26 ರಂದು ವಳಲಂಬೆ ದೇವಸ್ಥಾನದ ಧಾರ್ಮಿಕ ಸಭಾಭವನದಲ್ಲಿ ನಡೆಯಲಿರುವ ಭಜನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ತಾಲೂಕಿನ ಎಲ್ಲಾ ವಲಯದ ಯೋಜನೆಯ ಮೇಲ್ವಿಚಾರಕರಿಗೆ ಭಜನಾ ಮಂಡಳಿಗೆ ಆಮಂತ್ರಣ ಪತ್ರಿಕೆ ತಲುಪಿಸುವ ಜವಬ್ದಾರಿ ವಹಿಸಲಾಯಿತು. ಆರ್ಥಿಕ ಕ್ರೋಢಿಕರಣದ ಜವಬ್ದಾರಿ ಸಮಿತಿ ಪದಾಧಿಕಾರಿಗಳು ವಹಿಸಿಕೊಳ್ಳಲು ಸೂಚಿಸಲಾಯಿತು. ಈ ಸಂದರ್ಭ ಯೋಜನೆಯ ಮೇಲ್ವಿಚಾರಕರು ಹಾಗೂ ಭಜನಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದರು. ಮೇಲ್ವಿಚಾರಕ ವಸಂತ ಸ್ವಾಗತಿಸಿದರು. ಸುಧೀರ್ ನೆಕ್ರಾಜೆ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.