ಮುರುಳ್ಯ ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರೀ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಜೂ.5ರಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರ ಆಚಾರ್ಯ ಇಳಂತಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೇಲೂರು ವಿಶನಾಥ ಶರ್ಮ ಧಾರ್ಮಿಕ ಉಪನ್ಯಾಸ ನೀಡಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹಾಗೂ ಗೌರವ ಸಲಹೆಗಾರ ರಘುನಾಥ ರೈ ಕೆ.ಎನ್., ಆರ್ಥಿಕ ಸಮಿತಿ ಸಂಚಾಲಕಿ ಭಾಗೀರಥಿ ಮುರುಳ್ಯ, ಕಾರ್ಯಾಧ್ಯಕ್ಷ ವಸಂತ ನಡುಬೈಲು, ಮೂಡುಬಿದಿರೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಯಕರ ಪುರೋಹಿತರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ ಆಚಾರ್ಯ ಕಾಣಿಯೂರು, ಕಾಷ್ಠಶಿಲ್ಪಿ ಹಾಗೂ ಆಡಳಿತ ಸಮಿತಿ ಅಧ್ಯಕ್ಷ ಧನಂಜಯ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರವಿಚಂದ್ರ ಆಚಾರ್ಯ ಸಂಪ್ಯ ವೇದಿಕೆಯಲ್ಲಿದ್ದರು.
ಕುಳಾಯಿ ಪುರೋಹಿತರಾದ ಬಾಲಕೃಷ್ಣ ಕುಕ್ಕಟೆ ದೇವಳ ನಡೆದು ಬಂದ ಹಿನ್ನಲೆಯ ಬಗ್ಗೆ ಪ್ರಸ್ತಾವನೆ ಮಾಡಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಮರೋಳಿ ಸ್ವಾಗತಿಸಿದರು. ಸುಮ ವಿ.ಆಚಾರ್ಯ ಪ್ರಾರ್ಥಿಸಿದರು. ಮಧುಚಂದ್ರ ಆಚಾರ್ಯ ವಂದಿಸಿದರು. ಮುಂಡುಗಾರು ನಾರಾಯಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ, ಮಂಗಳೂರು, ಮಡಿಕೇರಿಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು. ಸಂಜೆ ಬಿಂಬಶುದ್ಧಿ, ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾದಿವಾಸ, ಶಯ್ಯಾದಿವಾಸ, ಬ್ರಹ್ಮಕಲಶಪೂರಣ, ಅಧಿವಾಸಹೋಮ, ಪೀಠನ್ಯಾಸ, ರತ್ನನ್ಯಾಸ, ಯಂತ್ರನ್ಯಾಸ, ಬಳಿಕ ಅನ್ನ ಸಂತರ್ಪಣೆ ನಡೆಯಿತು.