ಪೆರುವಾಜೆ ಸ.ಪ್ರ.ದ.ಕಾಲೇಜಿನಲ್ಲಿ ಪರಿಸರ ದಿನಾಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪರಿಸರದ ಕಡೆ ಎಚ್ಚರ,ಆದ್ಯತೆ ಇರಲಿ – ನರೇಂದ್ರ ರೈ ದೇರ್ಲ

ಇವತ್ತು ನಾವು ಎಲ್ಲಾ ಸುಖ ದುಡ್ಡಿನಲ್ಲಿದೆ ನಗರದಲ್ಲಿದೆ ಎನ್ನುವ ಕಾರಣಕ್ಕಾಗಿ ನಮ್ಮ ಅನ್ನದ ಸಮಯವನ್ನು ಹಣದ ಸಮಯವನ್ನಾಗಿ ಪರಿವರ್ತಿಸಿದ್ದೇವೆ. ಇಂತಹ ಸಮಯದಲ್ಲಿ ನಮ್ಮ ಎಚ್ಚರ, ನಮ್ಮ ಆದ್ಯತೆ ಪರಿಸರದ ಕಡೆಗೆ ಇಲ್ಲದೆ ಹೋದರೆ ನಮ್ಮ ನಂತರದ ತಲೆಮಾರಿಗೆ ಏನನ್ನು ವರ್ಗಾಯಿಸುತ್ತೇವೆ ಎನ್ನುವ ಯಕ್ಷ ಪ್ರಶ್ನೆ ನಮ್ಮ‌ಮುಂದೆ ಇದೆ ಎಂದು ಡಾ. ನರೇಂದ್ರ ರೈ ದೇರ್ಲ ಆತಂಕ ವ್ಯಕ್ತಪಡಿಸಿದರು.


ಡಾ.ದೇರ್ಲ ಅವರು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇದರ ಸಮಾಜಕಾರ್ಯ ವಿಭಾಗ
ಯುವ ರೆಡ್ ಕ್ರಾಸ್ ನ ಸಹಯೋಗದೊಂದಿಗೆ ಏರ್ಪಡಿಸಿದ್ದ ಪರಿಸರ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯ ನೆಲೆಯಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರಾಘವ ಎನ್. ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇಲ್ಲಿನ ಗ್ರಂಥಪಾಲಕ ರಾದ ಡಾ. ರವಿಚಂದ್ರ ನಾಯ್ಕ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಪ್ರಿಯಾ ಪಿ.ಆರ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಗಿರೀಶ್ ಸಿ.ಆರ್. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಪ್ರಕಟಿಸಿದರು. ಕು.ಲೀಸಾ ಮತ್ತು ಸಂಗಡಿಗರ ಪರಿಸರ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕುಮಾರಿ
ಚೈತನ್ಯ ಸ್ವಾಗತ ಕೋರಿ, ಕು.ಕೃತಿಕಾ ಧನ್ಯವಾದ ಸಮರ್ಪಣೆಯನ್ನು ಮಾಡಿದರು. ಕು. ಶಿಲ್ಪಾಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.