ಜೂ.11 ರಂದು ಬೆಳ್ಳಾರೆಯಲ್ಲಿ ಪ್ರತಿಭಟನೆ
ಬೆಳ್ಳಾರೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಗ್ರಾಮಗಳನ್ನು ಜಾಲ್ಸೂರು ಹಾಗೂ ಗುತ್ತಿಗಾರು ಕ್ಷೇತ್ರಗಳಿಗೆ ಸೇರಿಸಿ ಐತಿಹಾಸಿಕ ಬೆಳ್ಳಾರೆ ಜಿಲ್ಲಾ ಪಂಚಾಯತ್ ಹೆಸರನ್ನು ಮರೆಮಾಚಿಸಿದ ಬಿಜೆಪಿ ಸರ್ಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ಮನವಿ ಹಾಗೂ ಜೂನ್ 11 ರಂದು ಬೆಳ್ಳಾರೆಯಲ್ಲಿ ಪ್ರತಿಭಟನೆ ನಡೆಸಲು ಬೆಳ್ಳಾರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ.
ಬೆಳ್ಳಾರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಗ್ರಾಮಗಳನ್ನು ದೂರದ ಗುತ್ತಿಗಾರು ಹಾಗೂ ಉಳಿದ ಭಾಗವನ್ನು ಜಾಲ್ಸೂರು ಗೆ ಸೇರಿಸಿ ಐತಿಹಾಸಿಕ ಸ್ಥಳ ವನ್ನು ಕಡೆಗಣಿಸಿ ಬೆಳ್ಳಾರೆ ಭಾಗದ ಜನತೆಗೆ ದ್ರೋಹ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಸಭೆಯಲ್ಲಿ ಖಂಡನೆ ವ್ಯಕ್ತಪಡಿಸಲಾಯಿತು.
ಸಚಿನ್ ರಾಜ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷರಾದ ಅನಿಲ್ ರೈ ಚಾವಡಿ ಬಾಗಿಲು, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗನ್ನಾಥ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ರಾಜೀವಿ ರೈ, ಶ್ರೀಮತಿ ಸರಸ್ವತಿ ಕಾಮತ್ , ಬೆಳ್ಳಾರೆ ಪಂಚಾಯತ್ ಮಾಜಿ ಅಧ್ಯಕ್ಷ ರಾದ ವಿಠಲದಾಸ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ, ಸಹಕಾರಿ ಸಂಘದ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್,ಆನಂದ ಬೆಳ್ಳಾರೆ, ಕಂದಸ್ವಾಮಿ, ಬಶೀರ್ ನೇಲ್ಯಮಜಲು, ಕರುಣಾಕರ ದುರ್ಗಾ ನಗರ, ಹಮೀದ್ ಎಚ್ ಎಮ್, ಮುಸ್ತಫಾ, ಸುಂದರ್ ರಾಜ್, ತಾಜುದ್ದೀನ್ ಉಪಸ್ಥಿತರಿದ್ದರು.