ಚರಂಡಿ ಕೊಳಚೆ ಬಗ್ಗೆ ಭಾರೀ ಚರ್ಚೆ
ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಬೆಳ್ಳಾರೆ ಪೇಟೆಯ ಸ್ವಚ್ಛತೆಯ ಬಗ್ಗೆ ವಿಶೇಷ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆಯವರ ಅಧ್ಯಕ್ಷತೆಯಲ್ಲಿ ಜೂ.7 ರಂದು ಸಂಜೆ ನಡೆಯಿತು.
ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರರವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಭವಾನಿಶಂಕರರವರು ಬೆಳ್ಳಾರೆ ಪೇಟೆಯ ಚರಂಡಿ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಚಿವರಿಗೆ ದೂರುಗಳು ಹೋಗಿವೆ ಈ ಬಗ್ಗೆ ಮೀಟಿಂಗ್ ಕರೆಯಲು ಹೇಳಿದ್ದಾರೆ.
ಆದುದರಿಂದ ಸಭೆ ಕರೆದಿದ್ದೇವೆ ಎಂದು ಹೇಳಿದರು.
ಬೆಳ್ಳಾರೆ ಪೇಟೆಯ ಕೆಳಗಿನ ಪೇಟೆಯಲ್ಲಿ ಚರಂಡಿಯಲ್ಲಿ ಕೊಳಚೆ ತುಂಬಿದೆ,ಪ್ಲಾಸ್ಟಿಕ್ ,ಬಾಟಲಿಗಳು , ಇನ್ನಿತರ ಕಸಗಳು ತುಂಬಿ ಹೋಗಿವೆ, ನೀರು ಸರಿಯಾಗಿ ಹರಿದು ಹೋಗುವುದಿಲ್ಲ.ಕೆಲವು ಕಡೆ ಚರಂಡಿಯ ಸ್ಲಾಬ್ ಮುಚ್ಚಲಿಲ್ಲ ಇದರಿಂದ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಕುಡಿಯುವ ನೀರಿನ ಪೈಪುಗಳು ಕೂಡ ಕೆಲವು ಕಡೆಗಳಲ್ಲಿ ಚರಂಡಿ ಮೂಲಕವೇ ಹಾದು ಹೋಗುತ್ತದೆ ಇದರಿಂದ ಸಮಸ್ಯೆ ಉಂಟಾಗಬಹುದು.ವೆಂಕಟ್ರಮಣ ದೇವಸ್ಥಾನದ ಹತ್ತಿರದ ಮೋರಿಯಲ್ಲಿ ನೆರೆ ನೀರು ಮೇಲೆ ಬರುತ್ತದೆ.
ಮೋರಿಯನ್ನು ಕ್ಲೀನ್ ಮಾಡಬೇಕು.ಮತ್ತು ಅಲ್ಲಿ ಚರಂಡಿಗೆ ಸ್ಲಾಬ್ ಹಾಕಿ ಮುಚ್ಚಲಿಲ್ಲ ಹತ್ತಿರದವರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಹೇಳಿದರು.
ರಾತ್ರಿ ಹೋಟೆಲಿನವರು ಹೋಟೆಲಿನ ಮಲಿನ ನೀರನ್ನು ಚರಂಡಿಗೆ ಬಿಡುತ್ತಾರೆ ಎಂಬ ದೂರು ಕೂಡ ಬಂದಿದೆ.
ಹೋಟೆಲಿನವರು ಈ ರೀತಿ ಮಾಡಬಾರದು ಮಲಿನ ನೀರನ್ನು ಸಂಸ್ಕರಿಸಿದ ನಂತರ ಬಿಡಬೇಕು ಎಂದು ಹೇಳಿದರು.
ಈಗ ತಕ್ಷಣಕ್ಕೆ ಚರಂಡಿ ರಿಪೇರಿ ಕೆಲಸ ಮಾಡಬೇಕು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಲೋಕೇಶ್ ರವರು ಚರಂಡಿಗೆ ಎಲ್ಲಿ ಸ್ಲಾಬ್ ಇಲ್ಲವೋ ಅದನ್ನು ಮಾಡಿಕೊಡುವುದಾಗಿ ಮತ್ತು ನೀರು ನಿಲ್ಲುವಲ್ಲಿ ಕಾಂಕ್ರೀಟ್ ಹಾಕಿ ನೀರು ನಿಲ್ಲದ ಹಾಗೆ ಚರಂಡಿಯಲ್ಲಿ ಸರಾಗವಾಗಿ ಹರಿದುಹೋಗುವಂತೆ ಮಾಡಿಕೊಡುವುದಾಗಿ ಹೇಳಿದರು.
ಮುಂದೆ ಚರಂಡಿ ರಿಪೇರಿಯನ್ನು ಸ್ಥಳೀಯ ಸಂಸ್ಥೆಯವರೆ ನಿರ್ವಹಣೆ ಮಾಡಬೇಕು ಎಂದು ಅವರು ಹೇಳಿದರು.
*ಈಗ ಇದ್ದ ಚರಂಡಿ ಅವೈಜ್ಞಾನಿಕವಾಗಿದೆ*
ಈಗ ಬೆಳ್ಳಾರೆ ಪೇಟೆಯಲ್ಲಿರುವ ಚರಂಡಿ ವೈಜ್ಞಾನಿಕವಾಗಿ ಇಲ್ಲ.ಅವೈಜ್ಞಾನಿಕವಾಗಿದೆ ಎಂದು ಪಂಚಾಯತ್ ಸದಸ್ಯ ಅನಿಲ್ ರೈ ಹೇಳಿದರು.
ಪಿ.ಡಬ್ಲ್ಯೂ ಡಿಯವರು ಚರಂಡಿ ಮಾಡುವಾಗ ನೀರು ಕೆಳಗಡೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಿತ್ತು.
ಆದರೆ ಕೆಲವು ಕಡೆ ಎತ್ತರ ಆಗಿದೆ ಅಲ್ಲಿ ನೀರು ನಿಲ್ಲುತ್ತದೆ.ಕಸ,ಕಡ್ಡಿ ತ್ಯಾಜ್ಯ ನಿಂತು ವಾಸನೆ ಬರುತ್ತಿದೆ.ಇದನ್ನು ಮೊದಲು ಸರಿ ಮಾಡಬೇಕು ಎಂದು ಅನಿಲ್ ರೈ, ಇಕ್ಬಾಲ್ ಬೆಳ್ಳಾರೆ ಹೇಳಿದರು.
ಆಗ ಇಒ ಮತ್ತು ಇಂಜಿನಿಯರ್ ಎಲ್ಲಿ ಎಲ್ಲ ನೀರು ನಿಲ್ಲಿತ್ತದೊ ಅಲ್ಲಿ ಚರಂಡಿಯ ಮೇಲಿನ ಸ್ಲಾಬ್ ತೆಗೆದು ಕಾಂಕ್ರಿಟ್ ಹಾಕಿ ಸರಿ ಮಾಡುವುದಾಗಿ ಭರವಸೆ ನೀಡಿದರು.
*ತಳ್ಳು ಗಾಡಿ ಬಗ್ಗೆ ಚರ್ಚೆ*
ತಳ್ಳುವ ಗಾಡಿಯವರು ಗಾಡಿಯನ್ನು ಅಲ್ಲಿಯೇ ನಿಲ್ಲಿಸಿ ಟರ್ಪಾಲ್ ಹಾಕುತ್ತಾರೆ.
ಕೆಲವರು ಅಲ್ಲಿಗೆ ಗೋಡೆಯನ್ನು ಕಟ್ಟುತ್ತಾರೆ ಎಂದು ಹೇಳಿದರು.
ಇದಕ್ಕೆ ಇಒರವರು ತಳ್ಳು ಗಾಡಿಗೆ ಫರ್ಮಿಷನ್ ಕೊಡುವಾಗಲೇ ಅವರಿಗೆ ತಿಳಿಸಬೇಕು.ಇದರಿಂದ ಯಾರಿಗೂ ತೊಂದರೆಯಾಗಬಾರದು ಎಂದು ಹೇಳಿದರು.
*ಚರಂಡಿಯ ಕೊಳಚೆ ವಾಸನೆ,ಸೊಳ್ಳೆಯಿಂದ ನಿದ್ದೆ ಇಲ್ಲ*
ಚರಂಡಿಯ ಕೊಳಚೆ ನೀರಿನ ವಾಸನೆ ,ಸೊಳ್ಳೆಯ ಕಾಟದಿಂದ ನಮಗೆ ನಿದ್ದೆ ಇಲ್ಲ ಎಂದು ಮಹಿಳೆಯೋರ್ವರು ಹೇಳಿದರು.
ಕೆಳಗಿನ ಪೇಟೆಯ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಹತ್ತಿರ ಚರಂಡಿಯ ಸ್ಲಾಬನ್ನು ಮುಚ್ಚದೇ ಇದ್ದು ವಾಸನೆ ಬರುತ್ತಿದೆ.
ಅಲ್ಲಿ ಹತ್ತಿರವೇ ಹೋಟೆಲ್ ಇದ್ದು ಮನೆಯೂ ಇದ್ದು ಸೊಳ್ಳೆಗಳ ಕಾಟದಿಂದ ನಿದ್ದೆ ಬರುತ್ತಿಲ್ಲ.ಈ ಸಮಸ್ಯೆ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಹೋಟೆಲ್ ನ ತಾರಾಮತಿ ಎಂಬವರು ತಮ್ಮ ಅಳಲು ತೋಡಿಕೊಂಡರು.
ಇದಕ್ಕೆ ಇಒ ಮತ್ತು ಇಂಜಿನಿಯರ್ ಚರಂಡಿ ಸ್ಲಾಬ್ ಮುಚ್ಚಿಸುವ ಭರವಸೆ ನೀಡಿದರು.
ಎಂ.ಮಾಧವ ಗೌಡರು ವ್ಯಾಪಾರ ಲೈಸನ್ಸ್ ನವೀಕರಣ, ಘನತ್ಯಾಜ್ಯಶುಲ್ಕ,ಹಾಗೂ ಇನ್ನಿತರ ದರಗಳನ್ನು ಪಂಚಾಯತ್ ಹೆಚ್ಚಿಸಿದ್ದು ಅದನ್ನು ಹಳೆಯ ದರವನ್ನೇ ಮುಂದುವರಿಸಬೇಕೆಂದು ಕೇಳಿಕೊಂಡರು.
ವ್ಯಾಪಾರ ಲೈಸನ್ಸ್ ರಿನೀವಲ್, ಹೊಸ ಅಂಗಡಿಗಳಿಗೆ ಲೈಸನ್ಸ್, ರಸ್ತೆ ಅಗಲೀಕರಣ , ಅಂಗಡಿಗಳ ಮಾಲಕರು ಅಂಗಡಿಗಳನ್ನು ರಸ್ತೆ ಬದಿಗೆ ವಿಸ್ತರಿಸುವುದು.
ಪಂಚಾಯತ್ ಸಾಮಾನ್ಯ ಸಭೆ ತಿಂಗಳಿಗೆ ಸರಿಯಾಗಿ ಆಗದಿರುವುದು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ಪ್ರೇಮಚಂದ್ರ ಬೆಳ್ಳಾರೆ, ಜಯರಾಮ ಉಮಿಕ್ಕಳ,ಮಾಧವ ತಡಗಜೆ ಮತ್ತಿತರರು ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು, ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ, ಘನ,ದ್ರವ ತ್ಯಸಜ್ಯ ಜಿಲ್ಲಾ ಸಮಾಲೋಚಕ ಶೈವಿ ಆರ್.ಪಿ.ಗೋವಿಯಸ್ ,ತಾಲೂಕು ಆರೋಗ್ಯಾಧಿಕಾರಿ ನಂದಕುಮಾರ್, ಉಪಸ್ಥಿತರಿದ್ದರು.
ಪಿ.ಡಿ.ಒ ಅನುಷಾ ಸ್ವಾಗತಿಸಿದರು.