ಇತ್ತೀಚೆಗೆ ನಿಧನರಾದ ಸುಬ್ರಹ್ಮಣ್ಯದ ಹಿರಿಯ ಪತ್ರಕರ್ತ ಮಂಜುನಾಥ ರಾವ್ ಅವರಿಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಆರಂಭದಲ್ಲಿ ಹಿರಿಯ ಸಾಮಾಜಿಕ ಧುರೀಣ ಚಂದ್ರಶೇಖರ ಮೇಲ್ನಾಡ್ ದೀಪ ಬೆಳಗಿಸಿ ನುಡಿನಮನ ಸಲ್ಲಿಸಿದರು. ತದನಂತರ ಪತ್ರಕರ್ತ ವಿಶ್ವನಾಥ ನಡುತೋಟ ಪ್ರಾಸ್ತಾವಿಕ ನುಡಿಗಳೊಂದಿಗೆ ನುಡಿನಮನ ಸಲ್ಲಿಸಿದರು. ಬಳಿಕ ಶಿವರಾಮ ರೈ, ಯಜ್ಞೇಶ್ ಆಚಾರ್ ,ಪಿಡಿಒ ಯು .ಡಿ ಶೇಖರ್ ,ಅಶೋಕ ನೆಕ್ರಾಜೆ, ಗೋಪಾಲ ಎಣ್ಣೆಮಜಲು ,ಲೋಕೇಶ ಬಿ .ಎನ್, ಚಂದ್ರಶೇಖರ ನಾಯರ್ ,ಗಿರಿಧರ ಸ್ಕಂದ ,ಸುಬ್ರಹ್ಮಣ್ಯ , ನಾರಾಯಣ ಅಗ್ರಹಾರ, ಗ್ರಾ ಪಂ ಅಧ್ಯಕ್ಷೆ ಲಲಿತಾ ಗುಂಡ್ಯಡ್ಕ ,ಮುಂತಾದವರು ನುಡಿನಮನ ಸಲ್ಲಿಸಿದರು . ಸಭೆಯಲ್ಲಿ ಡಾ॥ ರವಿ ಕಕ್ಕೆಪದವು, ಕಿಶೋರ್ ಕುಮಾರ್ ಕೂಜುಗೋಡು, ಕೆ ವಸಂತ ಶೆಟ್ಟಿ, ರಘು, ಅಚ್ಯುತ ಗೌಡ ,ಮಂಜುನಾಥ ರಾವ್ ಅವರ ಸಹೋದರರಾದ ಎನ್ ಸುಬ್ರಹ್ಮಣ್ಯ ರಾವ್ ,ಹರೀಶ್ ರಾವ್, ನರಸಿಂಹ, ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು .