Breaking News

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಕ್ಷದ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜಗದೀಶ್ ರೈ ರಾಜೀನಾಮೆ ಪತ್ರ ಬ್ಲಾಕ್ ಸಮಿತಿಗೆ ಕಳುಹಿಸೋಣ

ಸಂಪಾಜೆ ವಲಯ ಕಾಂಗ್ರೆಸ್ ಸಭೆಯಲ್ಲಿ ಸೋಮಶೇಖರ್ ಕೊಯಿಂಗಾಜೆ

 

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷತೆ ಬಿಕ್ಕಟ್ಟು ಕುರಿತು ಚರ್ಚಿಸಲು ಸಂಪಾಜೆ ವಲಯ ಕಾಂಗ್ರೆಸ್ ನ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ಸಭೆಯು ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರ ನೇತೃತ್ವದಲ್ಲಿ ಜೂನ್ 8 ರಂದು ಕಲ್ಲುಗುಂಡಿಯ ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಜರುಗಿತು.

 

ಸಭೆಯಲ್ಲಿ‌ ಮಾತನಾಡಿದ ಸಂಪಾಜೆ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್ ಕೊಯಂಗಾಜೆಯವರು ಪ್ರಸ್ತುತ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದರು. 15 ತಿಂಗಳ ಹಿಂದೆ ಆದಂತಹ ಒಪ್ಪಂದದ ಪ್ರಕಾರ ಜಿ.ಕೆ.ಹಮೀದ್ ರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಶೌವಾದ್ ಗೂನಡ್ಕರವರಿಗೆ ಅಧಿಕಾರ ಹಸ್ತಾಂತರಿಸಬೇಕು. ಆದರೆ ವಲಯ, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಆದೇಶವನ್ನು ಧಿಕ್ಕರಿಸಿ ರಾಜೀನಾಮೆ ನೀಡದೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಜಿ.ಕೆ.ಹಮೀದ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಭೆಯಲ್ಲಿ ಹಾಜರಿದ್ದ ಎಲ್ಲರ ಅಭಿಪ್ರಾಯವನ್ನು ಸೋಮಶೇಖರ್ ಕೊಯಂಗಾಜೆಯವರು ಪಡೆದರು. ಈ ವೇಳೆ ಬಹುತೇಕರು ಸರ್ವಾನುಮತದಿಂದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಬೆರಳೆಣಿಕೆಯ ಕೆಲವರು ಮಾತ್ರ ಹಮೀದ್ ರವರಿಗೆ ಸಮಯಾವಕಾಶವನ್ನು ನೀಡುವಂತೆ ಕೋರಿಕೊಂಡರೆಂದೂ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜೂನ್ 9 ರಂದು ಜಿ.ಕೆ.ಹಮೀದ್ ರವರಿಗೆ ರಾಜೀನಾಮೆ ಸಲ್ಲಿಸಲು ಅಂತಿಮ ಗಡುವನ್ನು ನೀಡಲಾಗಿದೆ. ಇದಕ್ಕೆ ತಪ್ಪಿದಲ್ಲಿ ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಬ್ಲಾಕ್ ಕಾಂಗ್ರೆಸ್ ಗೆ ಶಿಫಾರಸ್ಸು ಮಾಡುವುದಾಗಿ ಸೋಮಶೇಖರ್ ಕೊಯಂಗಾಜೆಯವರು ತಿಳಿಸಿದರು. ಇದೇ ವೇಳೆ ಹಮೀದ್ ಅವರನ್ನು ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಅಮಾನತುಗೊಳಿಸಿ ಟಿ.ಐ.ಲೂಕಾಸ್ ಅವರನ್ನು ಪ್ರಭಾರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಲಾಗಿದೆ.
ಕೆ.ಆರ್.ಜಗದೀಶ್ ರೈಯವರು ಕಾಂಗ್ರೆಸ್ ಪಕ್ಷಕ್ಕೆ ನೀಡಿದಂತಹ ರಾಜೀನಾಮೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಅವರು ಪಕ್ಷಕ್ಕೆ ಮಾತ್ರವಲ್ಲ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೂ ಕೂಡ ರಾಜೀನಾಮೆ ನೀಡಬೇಕು, ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದ ಅವರು ಪಕ್ಷಕ್ಕೆ ದ್ರೋಹವನ್ನು ಬಗೆಯಬಾರದು ಇದು ಸಂಪಾಜೆಯ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡಿದ ಅವಮಾನವಾಗಿದೆ ಎಂದು ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರು ತಿಳಿಸಿದರು. ಈ ವೇಳೆ ಜಗದೀಶ್ ರೈ ಅವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್.ಡಿ.ಪಿ.ಐ.ಪಕ್ಷದ ಪರ ಮತಯಾಚಿಸಿದ್ದ ವಿಚಾರವು ಪ್ರಸ್ತಾಪವಾಯಿತು. ಜಗದೀಶ್ ರೈ ಅವರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಿ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೂ ಅವರಿಂದ ರಾಜೀನಾಮೆ ಪಡೆದು ಬೇರೊಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಿಗೆ ಅವಕಾಶ ಮಾಡಿಕೊಡುವಂತೆ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಪಕ್ಷಕಿಂತ ದೊಡ್ಡವರು ಯಾರು ಅಲ್ಲ ಇಂದು ನೀವುಗಳು ಗ್ರಾಮ ಪಂಚಾಯತು ಸದಸ್ಯರಾಗಿದ್ದರೆ ಅದು ಕಾರ್ಯಕರ್ತರ ದುಡಿಮೆ ಹಾಗು ಜನ ನಮ್ಮ ಮೇಲೆ ಇಟ್ಟಿರುವ ನಂಬಿಕೆ ಆದುದ್ದರಿಂದ ಪಕ್ಷದಲ್ಲಿ ವ್ಯಕ್ತಿಗೆ ಬೆಂಬಲವಾಗಿ ನಿಲ್ಲದೆ ನಾನೊಬ್ಬ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರು ಎಂದು ಭಾವಿಸಿ ನಡೆದರೆ ಇಂದು ಪಕ್ಷದ ಏಳಿಗೆಗೆ ಸಹಕಾರಿ ಆಗಬಹುದು ಇಲ್ಲದಿದ್ದಲಿ ಮುಂದೆ ಒಂದು ದಿನ ಪ್ರಸ್ತುತ ಇರುವ 13 ಪಂಚಾಯತ್ ಸದಸ್ಯರು 3 ಆಗುವ ಕಾಲ ಬರಬಹುದು ಆಗ ಯಾವ ಕುರ್ಚಿಗೆ ಹೋರಾಟ ಮಾಡುತ್ತೀರಿ ಎಂದು ಜನ ಕೇಳುವಂತೆ ಪಕ್ಷದ ಬೆಂಬಲದಿಂದ ಗೆದ್ದ ಸದಸ್ಯರು ಮಾಡದಿರಿ ಎಂದು ಸೋಮಶೇಖರ್ ಕೊಯಂಗಾಜೆಯವರು ಸದಸ್ಯರಲ್ಲಿ ವಿನಂತಿಸಿದರು. ಇಂದು ಸಂಪಾಜೆಯಲ್ಲಿ ನಾನೊಬ್ಬ ನಾಯಕನಾಗಿದ್ದರೆ ಅದಕ್ಕೆ ಕಾರಣ ನನ್ನ ಪಕ್ಷದ ಕಾರ್ಯಕರ್ತರ ದುಡಿಮೆ ಮತ್ತು ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ ಹಾಗೂ ನಂಬಿಕೆಯ ಫಲ. ನಮ್ಮಲ್ಲಿ ಒಗ್ಗಟ್ಟು, ಸಾಮೂಹಿಕ ಹೋರಾಟದಿಂದ ಪ್ರತೀ ಕ್ಷೇತ್ರದಲ್ಲಿ ಒಬ್ಬ ಸಮರ್ಥ ನಾಯಕನಾಗಿ ಜನ ಸೇವೆ ಮಾಡಿ ಬೆಳೆದ ಫಲವೆ ಸಂಪಾಜೆ ವಲಯ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಯಾಗಿ ನಾನೊಬ್ಬ ಸಮರ್ಥ ನಾಯಕನಾಗಿದ್ದೇನೆ ಇದನ್ನು ಇನ್ನುಲಿದ ನಾಯಕರು ಭಾವಿಸಿ ಅದಿಕಾರ ಶ್ವಾಶತ ಅಲ್ಲ ನಂಬಿಕೆ, ವಿಶ್ವಾಸ ನಿಷ್ಠೆ ಜನರ ಪ್ರೀತಿಗೆ ಧಕ್ಕೆ ಬರದಂತೆ ಜನಪ್ರತಿನಿಧಿಗಳಾದ ನಾವುಗಳು ನಡೆಯೋಣ ಎಂದು ಸಭೆಯಲಿ ತಿಳಿಸಿ ನಮ್ಮ ಒಗ್ಗಟ್ಟಿನಿಂದ ಪಕ್ಷವನ್ನು ಇದೇ ರೀತಿ ಉಳಿಸೋಣ ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರು ಎಲ್ಲರಲ್ಲಿ ವಿನಂತಿಸಿದರು. ಕಾರ್ಯಕರ್ತರ ಕೋರಿಕೆಯ ಮೇರಿಗೆ ಜೂನ್ 9 ರಂದು ಜಿ.ಕೆ.ಹಮೀದ್ ರವರಿಗೆ ರಾಜೀನಾಮೆ ಸಲ್ಲಿಸಲು ಅಂತಿಮ ಗಡುವನ್ನು ನೀಡಲಾಗಿದೆ ಅದನ್ನು ಪಾಲಿಸಿ ಅವರು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಈ ಹಿಂದೆ ಇದ್ದಂತಹ ಸ್ಥಾನಮಾನಗಳಲ್ಲಿ ಮುಂದುವರೆಯಲಿದ್ದಾರೆಂದು ಅವರು ಹೇಳಿದರು.ಪಕ್ಷದಲ್ಲಿ ಹಲವು ವರ್ಷಗಳಿಂದ ಸೇವೆ ಮಾಡಿರುವ ಹಿರಿಯ ಸದಸ್ಯರಾದ ಜಗದೀಶ ರೈ ಅವರ ಪಕ್ಷ ಸೇವೆಯನ್ನು ಪರಿಗಣಿಸಿ ಅವರ ರಾಜೀನಾಮೆ ಅಂಗಿಕರಿಸದೇ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ಗಮನಕ್ಕೆ ತಂದು ಅವರ ಅಹವಾಲನ್ನು ಕೇಳಲು ಸಮಯಾಕಾಶ ನೀಡುವ ಬಗ್ಗೆ ಸಭೆಯಲ್ಲಿ ಅಧ್ಯಕ್ಷರು ಕಾರ್ಯಕರ್ತರಿಗೆ ತಿಳಿಸಿದರು.
ಈ ವೇಳೆ ಸಂಪಾಜೆ ಗ್ರಾಮದ ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರು, ವಿವಿಧ ಘಟಕದ ಪದಾಧಿಕಾರಿಗಳು,ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.