ಹರಿಹರ ಪಲ್ಪತಡ್ಕ ಗ್ರಾ.ಪಂ ಮುಖಾಂತರ ಬಸವ ವಸತಿ ಮತ್ತು ಅಂಬೆಡ್ಕರ್ ವಸತಿ ಯೋಜನೆಗಳ ಫಲಾನುಭವಿಗಳಿಗೆ ಮಾಹಿತಿ ಮತ್ತು ಶರ್ತಗಳ ಮಾಹಿತಿ ಕಾರ್ಯಕ್ರಮ ಜೂ.9 ರಂದು ನಡೆಯಿತು.
ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ವಿಜಯ ಅಂಙಣ, ಗ್ರಾ.ಪಂ ಸದಸ್ಯರುಗಳಾದ ದಿವಾಕರ ಮುಂಡಾಜೆ, ಬಿಂದು ಪಿ, ಪದ್ಮಾವತಿ, ಶಿಲ್ಪಾ ಕೊತ್ನಡ್ಕ, ಉಪಸ್ಥಿತರಿದ್ದರು. ಪಿ ಡಿ ಒ ಮಣಿಯಾನ ಪುರುಷೋತ್ತಮ ವಸತಿ ಫಲಾನುಭವಿಗಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಬಸವ ವಸತಿ ನಿರ್ಮಿಸಲು ಕೆಲ ಫಲಾಭವಿಗಳಿಗೆ ಆದೇಶ ಪತ್ರ ನೀಡಲಾಯಿತು.