ಎಚ್ಚರ ತಪ್ಪಿದರೆ ಅಪಾಯ
ವಿದ್ಯುತ್ ಕಂಬ ಸಾಗಟದ ವೇಳೆ ಇಲಾಖಾ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.
ನಿನ್ನೆ ಸಂಜೆ ಸುಳ್ಯದ ಶ್ರಿರಾಮ್ ಪೇಟೆ ಬಳಿ ಜಟ್ಟಿಪಳ್ಳ ರಸ್ತೆಯ ಕಡೆಗೆ ಈಚರ್ ವಾಹನದಲ್ಲಿ ವಿದ್ಯುತ್
ಕಂಬವನ್ನು ಸಾಗಾಟ ಮಾಡುತ್ತಿದ್ದು, ಈ ವೇಳೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ವಿದ್ಯುತ್ ಕಂಬಗಳ ಸಾಗಾಟದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಿಯಮ ಪ್ರಕಾರ ವಾಹನಗಳಲ್ಲಿ ವಾಹನದ ಉದ್ದ ಅಳತೆಯ ಲೆಕ್ಕಕ್ಕಿಂತ ಇನ್ನೂ ಹೆಚ್ಚಿನ ವಿಸ್ತೀರ್ಣದ ಯಾವುದೇ ಸರಕು ಸಾಮಗ್ರಿಗಳನ್ನು ರವಾನಿಸುವ ಸಂದರ್ಭ ಕನಿಷ್ಠಪಕ್ಷ ಸಾಮಗ್ರಿಯ ತುದಿ ಭಾಗಕ್ಕೆ ಎಚ್ಚರಿಕೆ ನೀಡುವ ಬಟ್ಟೆಯ ತುಂಡುಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಹಿಂಬದಿಯಿಂದ ಬರುವ ವಾಹನ ಚಾಲಕರಿಗೆ ಸೂಚನೆ ಲಭಿಸುತ್ತದೆ.
ಆದರೆ ಇಂದು ನಡೆದ ಘಟನೆಯಲ್ಲಿ ಯಾವುದೇ ರೀತಿಯ ಮುಂಜಾಗೃತಾ ಸೂಚನೆಯನ್ನು ನೀಡದಂತಹ ರೀತಿಯಲ್ಲಿ ವಿದ್ಯುತ್ ಕಂಬದ ಸಾಗಾಣಿಕೆ ನಡೆಯಿತು.
ಇದನ್ನು ನೋಡಿದ ಈ ಭಾಗದಲ್ಲಿ ಬರುತ್ತಿದ್ದ ವಾಹನ ಚಾಲಕರು ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯತನದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.