ಸರಕಾರಿ ಪ್ರೌಢಶಾಲೆ ಮರ್ಕಂಜದಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ, ಪೋಷಕರ ಸಭೆ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪವಿತ್ರ ಗುಂಡಿ ಇವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾದ ಆನಂದ ಬಿ. ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ನಿವೃತ್ತ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಕೊಡಪಾಲ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ವಿದ್ಯಾರ್ಥಿಯು ಶಿಕ್ಷಣದಲ್ಲಿ ತನ್ನನ್ನು ತಾನು ಹೇಗೆ ತೊಡಗಿಸಿಕೊಳ್ಳಬೇಕು ಹಾಗೂ ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಯು ತನ್ನ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದರ ಮಾಹಿತಿ ನೀಡಿದರು.
ಶಾಲಾ ವಿದ್ಯಾರ್ಥಿ ಸಂಸತ್ತಿನ ಚುನಾಯಿತ ಪ್ರತಿನಿಧಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಎಂ ಟಿ ಇವರು ಪ್ರಮಾಣ ವಚನ ಬೋಧಿಸಿದರು. ಮಳೆಬಿಲ್ಲು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಅಲಂಕಾರಿಕ ವಸ್ತುಗಳು, ಆಟಿಕೆಗಳು, ಚಿತಕಲೆ ಇತ್ಯಾದಿಗಳನ್ನು ಪ್ರದಶನಕ್ಕಿಡಲಾಗಿತ್ತು. ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಲ್ಲಿಕಾ ಟಿ ಸ್ವಾಗತಿಸಿ, ಗೀತಾಕುಮಾರಿ ವಂದಿಸಿದರು.
ಅಚ್ಯುತ ಪಿ ಸಂಘಗಳ ಕುರಿತು,ಸುಜಯಕುಮಾರಿ ಶಾಲಾ ಕರ್ತವ್ಯ,ಶಿಸ್ತು,ಕ್ರೀಡೆಯ ಕುರಿತು ಮಾಹಿತಿ ಮತ್ತು ಪ್ರವೀಣಾಕುಮಾರಿ ಶೈಕ್ಷಣಿಕ ಕಾರ್ಯಕ್ರಮದ ಮಾಹಿತಿ,ವಿಜಯಲಕ್ಷ್ಮಿ ತಾಯಂದಿರ ಸಮಿತಿ ರಚನೆಯ ಕುರಿತು ಮಾಹಿತಿ ನೀಡಿದರು. ಕೆಂಚವೀರಪ್ಪರವರು ವಿಶ್ವ ತಂಬಾಕು ರಹಿತ ದಿನದ ಕುರಿತು ಮಾಹಿತಿ ನೀಡಿ,ತಂಬಾಕು ಸೇವನೆ ಮಾಡದಿರುವುದರ ಬಗ್ಗೆ ಪ್ರಮಾಣವಚನ ಬೋಧಿಸಿದರು. ರುಕ್ಮಿಣಿ ಕೆ ಕಾರ್ಯಕ್ರಮ ನಿರೂಪಿಸಿದರು.