ರೋಟರಿಯ ಅನನ್ಯ ಶೆಟ್ಟಿಗೆ 621 ಅಂಕ
ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದ್ದು ನಿರೀಕ್ಷೆಯ ಅಂಕ ಬರಲಿಲ್ಲವೆಂದು ಸುಳ್ಯ ರೋಟರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಅನನ್ಯ ಶೆಟ್ಟಿ ಇಂಗ್ಲಿಷ್ ಮತ್ತು ಹಿಂದಿ ಪ್ರಶ್ನೆ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಒಳಪಡಿಸಿದ್ದು ಇದೀಗ ಆಕೆ 8 ಅಂಕವನ್ನು ಹೆಚ್ಚು ಪಡೆದುಕೊಂಡು ಒಟ್ಟು 621 ಅಂಕ ಗಳಿಸಿಕೊಂಡಿದ್ದಾಳೆ. ರೋಟರಿ ವಿದ್ಯಾಸಂಸ್ಥೆಗೂ ಅಗ್ರಸ್ಥಾನಿಯಾಗಿದ್ದಾಳೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಾಗ ಅನನ್ಯ ಶೆಟ್ಟಿ ಇಂಗ್ಲೀಷ್ನಲ್ಲಿ 116 , ಕನ್ನಡದಲ್ಲಿ 1೦೦, ಹಿಂದಿಯಲ್ಲಿ 99, ಗಣಿತದಲ್ಲಿ 1೦೦, ವಿಜ್ಞಾನದಲ್ಲಿ 1೦೦ ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕದೊಂದಿಗೆ ಒಟ್ಟು 613 ಅಂಕ ಗಳಿಸಿಕೊಂಡಿದ್ದರು. ಇಂಗ್ಲೀಷ್ ಮತ್ತು ಹಿಂದಿ ವಿಷಯದಲ್ಲಿ ನಿರೀಕ್ಷೆಯಷ್ಟು ಅಂಕ ಬಂದಿಲ್ಲವೆಂದು ಅನನ್ಯ ಶೆಟ್ಟಿ ಆ ಎರಡು ಪ್ರಶ್ನೆ ಪತ್ರಿಕೆಯನ್ನು ಮರುಮೌಲ್ಯಮಾಪನಕ್ಕೆ ಒಳಪಡಿಸಿದರು. ಇದೀಗ ಫಲಿತಾಂಶ ಬಂದಿದ್ದು ಇಂಗ್ಲೀಷ್ನಲ್ಲಿ 7 ಅಂಕ ಹೆಚ್ಚು ಬಂದು ಒಟ್ಟು 123 ಹಾಗೂ ಹಿಂದಿಯಲ್ಲಿ 1 ಅಂಕ ಹೆಚ್ಚು ಬಂದು 1೦೦ ಅಂಕ ಗಳಿಸಿಕೊಂಡಿದ್ದಾಳೆ. ಒಟ್ಟು 621 ಅಂಕ ಗಳಿಸಿದ್ದಾಳೆ. ಆ ಮೂಲಕ ರೋಟರಿ ವಿದ್ಯಾಸಂಸ್ಥೆಗೂ ಅಗ್ರಸ್ಥಾನಿಯಾಗಿದ್ದಲ್ಲದೆ, ರಾಜ್ಯಕ್ಕೆ ನಾಲ್ಕನೇ ಸ್ಥಾನಿಯಾಗಿದ್ದಾರೆ.
ಈಕೆ ಸುಳ್ಯದ ಉದ್ಯಮಿ ಹರೀಶ್ ಶೆಟ್ಟಿ ಹಾಗೂ ಸುಜಾತ ಹರೀಶ್ ದಂಪತಿಗಳ ಪುತ್ರಿ.