ಕೃಷಿಕರಿಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

2022-23 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ಹಳದಿ ಎಲೆ ರೋಗಕ್ಕೆ ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹಧನ ಕಾರ್ಯಕ್ರಮದಡಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು. ಸದರಿ ಕಾರ್ಯಕ್ರಮದಡಿ ಕೊಡಿಯಾಲ, ನೆಲ್ಲೂರು ಕೆಮ್ರಾಜೆ, ಉಬರಡ್ಕ ಮಿತ್ತೂರು, ಸಂಪಾಜೆ, ಅರಂತೋಡು, ಕೊಲ್ಲಮೊಗ್ರ, ಆಲೆಟ್ಟಿ, ಮರ್ಕಂಜ ಹಾಗೂ ಮಡಪ್ಪಾಡಿ ಗ್ರಾಮದ ಅಡಿಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ರೈತರಿಗೆ ವಿವಿದ ಬೆಳೆ ಬೆಳೆದಲ್ಲಿ ಶೇಕಡ 5೦ ರಂತೆ ಹೆಕ್ಟೇರ್ ಗೆ ತೆಂಗು (ರೂ. 3೦,212), ತಾಳೆಬೆಳೆ (ರೂ. 22530), ಕಾಳುಮೆಣಸು (ರೂ. 66142), ಕೊಕ್ಕೋ (ರೂ. 4೦೦೦5), ಬಾಳೆ TC (ರೂ. 88017), ಕಾಫಿ Rubosta (ರೂ. 33653 ), ಕಾಫಿ Dwarf Arabica (ರೂ. 121316 ), ದಾಲ್ಚಿನ್ನಿ (ರೂ.84756 ), ರಾಂಬೂಟನ್ (ರೂ. 34550) ಹಾಗೂ ಜಾಯಿಕಾಯಿ (ರೂ. 44310 ) ರಂತೆ ಸಹಾಯಧನ ಲಭ್ಯವಿದ್ದು ಆಸಕ್ತ ಅಡಿಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ರೈತರು ಅರ್ಜಿಯನ್ನು ಗ್ರಾಮ ಪಂಚಾಯತ್ ನಿಂದ ಪಡೆದು ಜೂ.೩೦ ರೊಳಗೆ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅನುಮೋದಿತ ಸಂಸ್ಥೆ / ನರ್ಸರಿಯಿಂದ ಗಿಡ ಖರೀದಿ ಮಾಡಿದ ಬಿಲ್ಲು ನೀಡಿದ್ದಲ್ಲಿ ಸಹಾಯಧನ ನೀಡಲಾಗುವುದು
೨೦೨೨-೨೩ ನೇ ಸಾಲಿನ ರಾಜ್ಯ ವಲಯ ಯೋಜನೆಯ ಮಧುವನ ಹಾಗೂ ಜೇನು ಸಾಕಾಣಿಕೆ ಕಾರ್‍ಯಕ್ರಮದಡಿ ಜೇನು ಪೆಟ್ಟಿಗೆ ಹಾಗೂ ಕುಟುಂಬ ಖರೀದಿಗೆ ಸಹಾಯಧನ ಲಭ್ಯವಿದ್ದು, ಸಾಮಾನ್ಯ ರೈತರಿಗೆ ೪೩ ಪೆಟ್ಟಿಗೆ, ಪ.ಜಾತಿ ರೈತರಿಗೆ 17 ಪೆಟ್ಟಿಗೆ ,ಪರಿಶಿಷ್ಟ ಪಂಗಡ ರೈತರಿಗೆ ೭ ಪೆಟ್ಟಿಗೆ ಮಹಿಳಾ ರೈತರಿಗೆ 4೦ ಪೆಟ್ಟಿಗೆ ಅಲ್ಪಸಂಖ್ಯಾತ ರೈತರಿಗೆ 6 ಪೆಟ್ಟಿಗೆ ಹಾಗೂ ವಿಕಲಚೇತನ ರೈತರಿಗೆ 4 ಪೆಟ್ಟಿಗೆ ಲಭ್ಯವಿದ್ದು ಇಲಾಖೆಯಿಂದ ಜೇನು ಕೃಷಿ ತರಬೇತಿ ಪಡೆದ ಆಸಕ್ತ ರೈತರು ಜೂ.21 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಲು ಕೋರಿದೆ.
ಅರ್ಜಿಯೊಂದಿಗೆ ಅರ್ಜಿ ನಮೂನೆ, ಚಾಲ್ತಿಯಲ್ಲಿರುವ ಅರ್ಜಿದಾರರ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಮತದಾರರ ಗುರುತು ಚೀಟಿ ಜೆರಾಕ್ಸ್, ಆಧಾರ್ ಕಾರ್ಡ್ ಜೆರಾಕ್ಸ್, ಜಾತಿ ಪ್ರಮಾಣ ಪತ್ರ (ಪ.ಜಾತಿ ಮತ್ತು ಪ.ಪಂಗಡ ರೈತರಿಗೆ), ಅಂಗವಿಕಲ ರೈತರಿಗೆ ಅಂಗವಿಕಲ ದೃಢೀಕರಣ ಪತ್ರ, ಜೇನುಕೃಷಿ ತರಬೇತಿ ಪಡೆದ ಪ್ರಮಾಣ ಪತ್ರದ ಪ್ರತಿ, ಆರ್.ಟಿ.ಸಿ., ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ/ಜಿ.ಪಿ.ಎ. ಪತ್ರ ಲಗತ್ತಿಸಬೇಕೆಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.