ಎಲಿಮಲೆ ಹೇಮಾವತಿ ಕ್ಯಾಶ್ಸೂಸ್ ನ ಮ್ಹಾಲಕ ಗೋಪಾಲಕೃಷ್ಣ ಭಟ್ ಕಿಲಾರ್ಕಜೆಯವರ ತಾಯಿ ನೆಲ್ಲೂರು ಕೆಮ್ರಾಜೆ ಗ್ರಾಮದ ಕೀಲಾರ್ಕಜೆ ಹೇಮಾವತಿ ಭಟ್ ಎಂಬವರು ಇಂದು ಮಧ್ಯಾಹ್ನದ ವೇಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಅವರಿಗೆ ಸುಮಾರು 85 ವರ್ಷ ಪ್ರಾಯವಾಗಿತ್ತು.
ಹೇಮಾವತಿಯವರು ಸುಮಾರು 10 ಗಂಟೆಯ ವೇಳೆಗೆ ತಮ್ಮ ತೋಟದ ಕೆಲಸದವರಿಗೆ ಚಾಹ ನೀಡಿದ್ದರು. ಆ ಬಳಿಕ ಮನೆಯ ರೂಮಿನೊಳಗೆ ಕೀಟನಾಶಕ ಸೇವಿಸಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಕೆಲಸದವರಿಗೆ ಮನೆಯ ಕೊಠಡಿಯಿಂದ ವಾಸನೆ ಬರತೊಡಗಿ ಕಿಠಕಿಯ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಆತ್ಯಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪುತ್ರ, ಪುತ್ರಿಯರಾದ ಜಯಂತಿ, ಸಂಧ್ಯಾ ಹಾಗೂ ಸೊಸೆ ಮೊಮ್ಮಕ್ಕಳನ್ನು ಅಗಲಿದ್ದಾರೆ.