ಮರ್ಕಂಜ ಸರಕಾರಿ ಪ್ರೌಢಶಾಲೆಯ ಕಂಪೌಂಡ್ ನ್ನು ಕಿಡಿಗೇಡಿಗಳು ಜೂ.8ರಂದು ರಾತ್ರಿ ಹಾನಿಗೊಳಿಸಿದ ಘಟನೆ ವರದಿಯಾಗಿದೆ.
ಮರ್ಕಂಜ ಸರಕಾರಿ ಪ್ರೌಢಶಾಲೆಯ ಎಡಬದಿಯ ಕಂಪೌಂಡ್ ನಲ್ಲಿ ಸಣ್ಣ ಗೇಟ್ ಇರುವ ಬಳಿ ಕಂಪೌಂಡ್ ನ ಕಲ್ಲನ್ನು ಜರಿದು ಗೇಟನ್ನು ಕಿತ್ತು ಹಾನಿಗೊಳಿಸಲಾಗಿದೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ವೀಣಾ ಎಂ.ಟಿ.ಯವರು ಜೂ.9ರಂದು ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಸ್ಥಳ ತನಿಖೆಗೆ ಪೋಲೀಸರು ಇನ್ನಷ್ಟೆ ಬರಬೇಕಾಗಿದೆ.