ಸುಳ್ಯ ವಕೀಲರ ಸಂಘದ ಪದಾಧಿಕಾರಿಗಳಿಂದ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಮತ್ತು ದ ಕ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಸೋಮಶೇಖರ ಇವರನ್ನು ಭೇಟಿಯಾಗಿ ಸುಳ್ಯ ಸಿವಿಲ್ ಜಡ್ಜ್ ಮತ್ತು ಜೆಎಂಎಪ್ ಸಿ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ವಿನಂತಿಸಲಾಗಿದೆ.
ಮತ್ತು ಸುಳ್ಯ ಸಿವಿಲ್ ಜಡ್ಜ್ ಮತ್ತು ಜೆಎಂಎಪ್ ಸಿ ನ್ಯಾಯಾಲಯದ ಪ್ರಕರಣಗಳನ್ನು ನಡೆಸಲು ಬೆಳ್ತಂಗಡಿ ನ್ಯಾಯಾಲಯಕ್ಕೆ ನೀಡಿರುವ ಅಧಿಕಾರವನ್ನು ಸುಳ್ಯ ಹಿರಿಯ ವಿಭಾಗದ ಸಿವಿಲ್ ನ್ಯಾಯಾಲಯಕ್ಕೆ ನೀಡುವಂತೆ ವಿನಂತಿಸಿಕೊಂಡ ಮೇರೆಗೆ, ಸುಳ್ಯ ವಕೀಲರ ಸಂಘದ ಮನವಿಯನ್ನು ಪರಿಗಣಿಸಿ ಪುತ್ತೂರು ನ್ಯಾಯಾಲಯಕ್ಕೆ ಸುಳ್ಯ ಸಿವಿಲ್ ಜಡ್ಜ್ ಮತ್ತು ಜೆಎಂಎಪ್ ಸಿ ನ್ಯಾಯಾಲಯದ ಪ್ರಕರಣಗಳನ್ನು ನಡೆಸುವ ಅಧಿಕಾರವನ್ನು ನೀಡಿ ಆದೇಶ ಮಾಡುವಂತೆ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೆ ಗೌಡ ಇವರಿಗೆ ಸೂಚಿಸಿರುತ್ತಾರೆ.
ಮನವಿ ಸಂದರ್ಭ ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ಕೋಶಾಧಿಕಾರಿ ಜಗದೀಶ್ ಡಿ ಪಿ ,ಕ್ರೀಡಾ ಕಾರ್ಯದರ್ಶಿ ಸತೀಶ್ ಕುಂಭಕೋಡು, ಗ್ರಂಥಾಲಯ ಕಾರ್ಯದರ್ಶಿ ಹರ್ಷಿತ್ ಕಾರ್ಜ, ನ್ಯಾಯವಾದಿ ಶ್ಯಾಮ್ ಪಾನತ್ತಿಲ, ವಿನೋದ್ ಕುಮಾರ್ ಕುಕ್ಕುಂದೂರು ಜೊತೆಗಿದ್ದರು.