Breaking News

ಜ್ಞಾನದೀಪ ಎಲಿಮಲೆಯಲ್ಲಿ ವಿದ್ಯಾರ್ಥಿ ಮಂಡಲದ ಚುನಾವಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 


ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂಡಲದ ಚುನಾವಣೆಯು ಜೂ.11ರಂದು ನಡೆಯಿತು. ಇಲ್ಲಿ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಚುನಾವಣೆ ನಡೆಸಲಾಗಿದ್ದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಚಿಹ್ನೆ ನೀಡುವಿಕೆ, ಪ್ರಚಾರ ಮುಂತಾದ ಎಲ್ಲಾ ಪ್ರಕ್ರಿಯೆ ನಡೆಸಲಾಯಿತು.

 

ಚುನಾವಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿ, ಸಹಿ, ಬೆರಳಿಗೆ ಶಾಹಿಯ ಗುರುತಿನ ನಂತರ ಶಾಲಾ ನಾಯಕ ಹಾಗೂ ಉಪನಾಯಕನ ಆಯ್ಕೆಗೆ ಮತ ಚಲಾಯಿಸಿದರು. ನಂತರ ಮುಖ್ಯೋಪಾಧ್ಯಾಯರು ಅಭ್ಯರ್ಥಿಗಳು ಮತ್ತು ಮತಚಲಾಯಿಸಿದ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಸಲಾಯಿತು. ಅದರಲ್ಲಿ ಶಾಲಾನಾಯಕನ ಆಯ್ಕೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದ ಚಿಂತನ್ ಕೆ. ಎಸ್. 10ನೇ ತರಗತಿ ಮತ್ತು ಶಾಲಾ ಉಪನಾಯಕನ ಆಯ್ಕೆಯಲ್ಲಿ ಶ್ರೇಯ ಎಂ. 9ನೇ ತರಗತಿ ಆಯ್ಕೆಗೊಂಡರು.
ಶಾಲಾ ನಾಯಕನ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಪೂಜಾ 10 ನೇ ತರಗತಿ ವಿರೋದ ಪಕ್ಷದ ನಾಯಕಿಯಾಗಿ ಆಯ್ಕೆಯಾದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.