ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಂಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಹವಾಮಾನಾಧರಿತ ಬೆಳೆ ವಿಮೆ ೨೦೨೨ರ ನೊಂದಾವಣೆಗೆ ಪ್ರಾರಂಭದಲ್ಲಿ ತೊಡಕು ಉಂಟಾಗಿದ್ದು, ಕೃಷಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಬಿ.ಜೆ.ಪಿ. ಮಂಡಲ ಸಮಿತಿ ಸಚಿವರಾದ ಎಸ್. ಅಂಗಾರ ಇವರಲ್ಲಿ ನಿವೇದಿಸಿಕೊಂಡ ಮೇರೆಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿ ಮತ್ತು ಬೆಳೆ ವಿಮೆಯ ವಿಮಾ ಕಂಪೆನಿಯವರೊಂದಿಗೆ ಬೆಂಗಳೂರಿನಲ್ಲಿ ವ್ಯವಹರಿಸಿದ್ದು, ಜೂ.೮ ರಂದು ನೊಂದಾವಣೆಗಿದ್ದ ಎಲ್ಲಾ ಸಮಸ್ಯೆಗಳು ಪರಿಹರಿಸಲ್ಪಟ್ಟಿವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ.
ಪಹಣಿ ಪತ್ರಿಕೆಯಲ್ಲಿ ನಮೂದುಗೊಂಡಿರುವ ಹೆಸರು ಮತ್ತು ಆಧಾರ್ ಕಾರ್ಡಿನಲ್ಲಿರುವ ಹೆಸರು ವ್ಯತ್ಯಾಸವಿದ್ದಲ್ಲಿ ನೋಂದಾವಣೆಗೆ ಅವಕಾಶ ಇಲ್ಲದೇ ಇದ್ದು ಇದೀಗ ಸ್ವಾಪ್ಟ್ವೇರ್ನಲ್ಲಿ ಅವಕಾಶ ನೀಡಿದೆ.
ಜಂಟಿ ಖಾತೆ ಹೊಂದಿರುವ ಕೃಷಿಕರಿಗೂ ಬೆಳೆ ವಿಮೆ ನೋಂದಾಯಿಸಲು ಅವಕಾಶ ಕಲ್ಪಿಸಿದೆ.
ಪಹಣಿ ಪತ್ರಿಕೆಯಲ್ಲಿ ಬೆಳೆಗಳ ವಿವರ (ಅಡಿಕೆ, ಕಾಳುಮೆಣಸು) ಇಲ್ಲದೇ ಇದ್ದಲ್ಲಿ ನೊಂದಾಯಿಸಲು ಅವಕಾಶ ಕಲ್ಪಿಸಿದೆ. ಪಹಣಿ ಪತ್ರಿಕೆಯಲ್ಲಿ ಬೆಳೆ ನಮೂದಿಗೆ ಬಿಟ್ಟು ಹೋಗಿರುವ ಬೆಳೆಗಳ ನಮೂದನ್ನು ನೊಂದಾಯಿಸಿಕೊಳ್ಳಲು ಅಕ್ಟೋಬರ್ ತಿಂಗಳಿನಲ್ಲಿ ಅವಕಾಶ ಇರುವುದು. ಆದುದರಿಂದ ಎಲ್ಲಾ (ಅಡಿಕೆ, ಕಾಳುಮೆಣಸು) ಕೃಷಿಕರು ಜೂನ್ ೩೦ ೨೦೨೨ ರೊಳಗೆ ತಮ್ಮ ಬೆಳೆಗಳಿಗೆ ವಿಮಾ ಮೊತ್ತವನ್ನು ಪಾವತಿಸಿ ಸದ್ರಿ ಮಹತ್ವಾಕಾಂಕ್ಷಿ ಯೋಜನೆಯ ಫಲಾನುಭವಿಗಳಾಗಬೇಕೆಂದು ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ.