Breaking News

ಎಣ್ಮೂರು: ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೀತಲ್ ಯು.ಕೆ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಎಣ್ಮೂರು ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾಗಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿ ಪದೋನ್ನತಿ ಪಡೆದು ವರ್ಗಾವಣೆಗೊಂಡ ಶ್ರೀಮತಿ ಶೀತಲ್ ಯು.ಕೆಯವರಿಗೆ ಬೀಳ್ಕೋಡುಗೆ ಸಮಾರಂಭವು ಶಾಲಾ ಉಸ್ತುವಾರಿ ಮತ್ತು ಶಾಲಾಭಿವೃದ್ಧಿ ಸಮಿತಿ, ಅಧ್ಯಾಪಕವೃಂಧ, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ ವೃಂದದಿ0ದ ಜೂ.11 ರಂದು ನಡೆಯಿತು.

ನಿಂತಿಕಲ್ಲು ಶ್ರೀ ಲಕ್ಷ್ಮೀ ವೆಂಕಟ್ರಮಣ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಳ್ಯ ಗ್ರಾ.ಪಂ ಅಧ್ಯಕ್ಷೆ ಕು. ಜಾನಕಿ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್.ಪಿ. ದೀಪ ಪ್ರಜ್ವಲನೆ ಮಾಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವನಿತಾ ಸುವರ್ಣ, ಸದಸ್ಯರಾದ ಕರುಣಾಕರ ಹುದೇರಿ, ಸುಂದರ ಗೌಡ ಪಾಪುತ್ತಡಿ, ಶ್ರೀಮತಿ ಪುಷ್ಪಲತಾ, ಎ.ಪಿ.ಎಂ.ಸಿ ಮಾಜಿ ಆಧ್ಯಕ್ಷ ಜಾಕೆ ಮಾಧವ ಗೌಡ, ಧರ್ಮಶ್ರೀ ಆರ್ಕೇಡ್‌ನ ಮಾಲಕ ದೀಕ್ಷಿತ್ ಬೆಳ್ಳಾರೆ, ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನದ ಅಧ್ಯಕ್ಷ ವಸಂತ ನಡುಬೈಲು, ಕೋಟೆ ಫೌಂಡೇಶ್‌ನ ಸದಸ್ಯ ರಮೇಶ್ ಕೋಟೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಪದ್ಮನಾಭ, ಶಾಲಾ ನಾಯಕಿ ದಿಶಾ ಉಪಸ್ಥಿತರಿದ್ದರು. ಶಾಲೆಯ ಬೆಳವಣಿಗೆ ಮತ್ತು ಸನ್ಮಾನಿತರ ಬಗ್ಗೆ ಸಹಶಿಕ್ಷಕಿ ಸಾವಿತ್ರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

2021- 22 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸುಮಂತ್ ಕೇರ್ಪಡ, ಪವನ್ ನೂಜಾಡಿ, ಮೋಕ್ಷಿತ್ ಕೊಡಾರ, ದಿವೀಶ್ ಪಲ್ಲೋಡಿ, ಮೋಕ್ಷ  ಕುಳ್ಸಿಗೆಯವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

. ಮುಖ್ಯ ಶಿಕ್ಷಕಿ ಸುಮಿತ್ರ ಕೆ. ಸ್ವಾಗತಿಸಿ, ಸಹಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಪಿ ವಂದಿಸಿದರು.

ಸಹಶಿಕ್ಷಕರಾದ ಮೋಹನ್ ಗೌಡ, ಸಂತೋಷ್ ಕುಮಾರ್, ದಿವ್ಯ ಮೋಹನ್ ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು.

ಬಳಿಕ ಸುಳ್ಯ ಶಿಕ್ಷಕರ ಯಕ್ಷಗಾನ ಒಕ್ಕೂಟದ ವತಿಯಿಂದ ಕೃಷ್ಣರ್ಜುನ ಕಾಳಗ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.