ಸುಬ್ರಹ್ಮಣ್ಯ ಪೊಲೀಸ್ ಠಾಣೆ ದುರಸ್ತಿಗೊಳಿಸದಿದ್ದರೆ ಕಾಂಗ್ರೆಸ್ ವತಿಯಿಂದ ದುರಸ್ತಿ: ಕಡಬ ಬ್ಲಾಕ್ ಕಾಂಗ್ರೆಸ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಪೊಲೀಸ್ ಠಾಣೆಯ ಸ್ಥಿತಿಯು ಶೋಚನೀಯವಾಗಿದೆ. ನಾಡಿನ ಶ್ರೀಮಂತ ದೇವಸ್ಥಾನವಿರುವ ಕ್ಷೇತ್ರದ ಠಾಣೆಯ ದುಸ್ಥಿತಿ ಸರಕಾರಕ್ಕೆ ನಾಚಿಕೇಡಿನ ವಿಷಯ. ಸಚಿವರು, ಶಾಸಕರು, ಉಸ್ತುವಾರಿ ಸಚಿವರು ಮತ್ತು ಸರಕಾರ ಇಲ್ಲಿನ ಠಾಣೆಯನ್ನು ಕೂಡಲೇ ದುರಸ್ತಿ ಕಾರ್ಯ ಮಾಡಬೇಕು.ಈ ಬಗ್ಗೆ ಹೆಚ್ಚಿನ ಉತ್ಸುಕತೆ ತೋರಬೇಕು. ಉಸ್ತುವಾರಿ ಸಚಿವರು ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಬೇಕು. ಜೂನ್ ಅಂತ್ಯದೊಳಗೆ ದುರಸ್ತಿ ಮಾಡದೇ ಇದ್ದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಮೂಲಕ ದುರಸ್ತಿ ಮಾಡುವ ಕಾರ್ಯ ನಡೆಸಲಾಗುವುದು ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು. ಅವರು ಜೂ.11 ರಂದು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ  ತಿಳಿಸಿದರು.

ಸುಬ್ರಹ್ಮಣ್ಯಕ್ಕೆ ನಿತ್ಯ ಸಾವಿರಾರು ಭಕ್ತರು ಬೇಟಿ ನೀಡುತ್ತಿದ್ದು, ಗಣ್ಯರು ಬೇಟಿ ನೀಡುತ್ತಿರುತ್ತಾರೆ. ಆದ್ದರಿಂದ ಇಲ್ಲಿ ಪೊಲೀಸರ ಕರ್ತವ್ಯ ಅತೀ ಅಮೂಲ್ಯವಾಗಿದೆ. ಅವರು ಕೆಲಸ ನಿರ್ವಹಿಸುವ ಕಛೇರಿ ಶಿಥಿಲಾವಸ್ಥೆಯಲ್ಲಿರುವುದು ಬೇಸರದ ಸಂಗತಿ. ಕೂಡಲೇ ದುರಸ್ತಿಗೆ ಕ್ರಮ ವಹಿಸಬೇಕಿದೆ ಎಂದರು.
ವಸತಿ ಯೋಜನೆಯಡಿ ಹಲವರಿಗೆ ಮನೆ ನಿರ್ಮಿಸಲು ಅವಕಾಶ ನೀಡಿದ್ದರೂ ಮರಳಿಗೆ ಸಂಕಷ್ಟ ಸ್ಥಿತಿ ಇದೆ. ಸ್ಥಳೀಯ ಮರಳನ್ನು ಗ್ರಾ.ಪಂ. ಮೂಲಕ ವಸತಿ ಯೋಜನೆಯ ಫಲಾನುಭವಿಗಳಿಗೆ ನೀಡಲು ಸರಕಾರ, ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾತನಾಡಿ, ಸುಬ್ರಹ್ಮಣ್ಯದ ಗ್ರಾಮ ಕರಣಿಕರ ಕಛೇರಿ ಬೀಳುವ ಸ್ಥಿತಿಯಲ್ಲಿದ್ದು ಕೂಡಲೇ ದುರಸ್ತಿ ಮಾಡಬೇಕು.ಅಲ್ಲದೆ ಸುಬ್ರಹ್ಮಣ್ಯದ ಮೆಸ್ಕಾಂ ಉಪ ವಿಭಾಗ ಕಚೇರಿಯು ಕೂಡಾ ಶಿಥಿಲಾವಸ್ಥೆಯಲ್ಲಿದೆ. ಹಳೆಯ ಬಾಡಿಗೆಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಉಪ ವಿಭಾಗ ಕಚೇರಿಗೆ ಶೀಘ್ರ ಸ್ವಂತ ನೂತನ ಕಟ್ಟಡ ನಿರ್ಮಾಣವಾಗಬೇಕು ಎಂದು ಹೇಳಿದರು.
ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ ಮಾತನಾಡಿ, ಸುಬ್ರಹ್ಮಣ್ಯದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಸಮಸ್ಯೆ ಆಗುತ್ತಿದೆ. ಸಿಬ್ಬಂದಿ ಕೊರತೆಯಿಂದ ಪಾರ್ಕಿಂಗ್ ನಿರ್ವಹಣೆ ಆಗುತ್ತಿಲ್ಲ ಎಂದು ದೂರಿದ ಅವರು ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

ಈ ಸಂದರ್ಭ ಸುಬ್ರಹ್ಮಣ್ಯ ಐನೆಕಿದು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯ ಲೋಲಾಕ್ಷ ಕೈಕಂಬ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.