ಸುಳ್ಯ ಎಸ್ ಐ ದಿಲೀಪ್ರವರು ರವರು ನಿನ್ನೆ ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಸಂಪಾಜೆ ಗ್ರಾಮದ ನೆಲ್ಲಿ ಕುಮೇರಿ ಬಳಿ ಗಾಂಜಾ ಸೇವನೆ ನಡೆಸಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಅನುಚಿತವಾಗಿ ವರ್ತಿಸುತ್ತಿದ್ದ ವರನ್ನು ಗಮನಿಸಿದಾಗ ಈ ವ್ಯಕ್ತಿಗಳು ಮಾದಕ ದ್ರವ್ಯವಾದ ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದು ವಿಚಾರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ನೆಲ್ಲಿಕುಮೇರಿಯ ಪ್ರಕಾಶ್ (೨೩), ಜಾಯಲ್ ಡಿಸೋಜಾ (೨೨) ಬಂಧಿತ ಆರೋಪಿಗಳಾಗಿದ್ದು, ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಢಪಡಿಸಿಕೊಳ್ಳಲು ಮಂಗಳೂರು ದೇರಳಕಟ್ಟೆ ಕೆ, ಎಸ್ ಹೆಗ್ಡೆ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಢ ಪಟ್ಟಿರುವುದಾಗಿ ತಿಳಿದುಬಂದಿದೆ.