ಕಳಂಜದಲ್ಲಿ ಪಂಚಮಿ ಸಂಜೀವಿನಿ ಒಕ್ಕೂಟದ ಅಡಿಯಲ್ಲಿ 20 ಜನರ ರೈತ ಉತ್ಪಾದಕರ ಮಹಿಳಾ ಸಂಘ ಮನಸ್ಸು ಇದನ್ನು ಗ್ರಾ. ಪಂ ಅಧ್ಯಕ್ಷರಾದ ಪ್ರಶಾಂತ್ ಕಿಲಂಗೋಡಿ ಜೂ. 10ರಂದು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ಅಧ್ಯಕ್ಷೆಯಾಗಿ ರೇವತಿ. ಎಂ, ಕಾರ್ಯದರ್ಶಿಯಾಗಿ ರೇವತಿ. ಪಿ ಆಯ್ಕೆಯಾದರು. ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಶ್ರೀಧರ್ ರೈತ ಮಹಿಳಾ ಸಂಘದ ಉದ್ದೇಶವನ್ನು ವಿವರಿಸಿದರು. ಗ್ರಾಮದ M.B. K ಪುಷ್ಪಾವತಿ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷೆ ರತ್ನಾವತಿ ಶುಭ ಹಾರೈಸಿದರು. ಗ್ರಾಮದ L.C. R. P ಗಳಾದ ಯಶೋಧ
ಎಂ ಮತ್ತು ಸೌಮ್ಯ ಕೆ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.