Breaking News

ಅಜ್ಜಾವರದಲ್ಲಿ ಬಿತ್ತೋತ್ಸವ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಅಜ್ಜಾವರ ಸ.ಪ್ರೌ.ಶಾಲೆ ಇಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ, ಸುಬ್ರಹ್ಮಣ್ಯ ಉಪ ವಿಭಾಗ, ಸುಳ್ಯ ಪ್ರಾದೇಶಿಕ ವಲಯ ಇದರ ವತಿಯಿಂದ ಶಾಲೆಯ ಮಂದಾರ ಇಕೋ ಕ್ಲಬ್ , ಪಯಸ್ವಿನಿ ಗೈಡ್ಸ್ ಹಾಗೂ ಇನ್ನಿತರ ಸಂಘಗಳ ವತಿಯಿಂದ ಬಿತ್ತೋತ್ಸವ -2022 ಕಾರ್ಯಕ್ರಮ ನಡೆಯಿತು .

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಲೀಲಾ ಮನಮೋಹನ್ ಅವರು ವಹಿಸಿದ್ದು , ಮುಖ್ಯ ಅತಿಥಿಗಳಾಗಿ ಅರಣ್ಯಾಧಿಕಾರಿ ಶ್ರೀ ಗಿರೀಶ್ , ಮಂಡ್ಯ , ಫಾರೆಸ್ಟರ್ ವಿ .ಹೆಚ್ . ಕರಣೆಮಠ , ಗುರುರಾಜ್ ಅಜ್ಜಾವರ ಇವರು ಬಿತ್ತೋತ್ಸವದ ಮಹತ್ವವನ್ನು ತಿಳಿಯಪಡಿಸಿದರು . ಶಾಲಾ ಮುಖ್ಯೋಪಾಧ್ಯಾಯರಾದ ಗೋಪಿನಾಥ ಮೆತ್ತಡ್ಕ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು . ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಾರ್ಡ್ ಸದಸ್ಯರಾದರಾಹುಲ್ ಅಡ್ಪಂಗಾಯ, ಶ್ರೀಮತಿ ಬೇಬಿ , ಹಿ .ವಿ .ಸಂಘದ ಅಧ್ಯಕ್ಷರಾದ ಅನಿಲ್ ರಾಜ್ , ನವೀನ್ .ಕೆ , ಹಿ.ವಿ.ಸಂಘದ ಕಾರ್ಯದರ್ಶಿ , ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷರಾದ ಶಶ್ಮಿ ಭಟ್ , ಸ.ಹಿ.ಪ್ರಾ .ಶಾಲೆ , ಅಡ್ಪಂಗಾಯದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ , ಸಮುದಾಯ ಕಾರ್ಯಕರ್ತೆ ಭವ್ಯ ನಾರ್ಕೋಡು , ಮಾಜಿ ಸರ್ವೇಯರ್ ಜನಾರ್ದನ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು . ಶಾಲಾ ಶಿಕ್ಷಕರಾದ ಹೇಮಲತಾ ಜೆ ಎ0 ಸ್ವಾಗತ ಕೋರಿ , ಚಂದ್ರಶೇಖರ ಭಟ್ .ಎ ವಂದನಾರ್ಪಣೆಗೈದರು . ವಿದ್ಯಾ ಶಂಕರಿ .ಯಸ್ ಕಾರ್ಯಕ್ರಮ ನಿರೂಪಣೆ ಮಾಡಿದರು . ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು . ಅಂತೆಯೇ ಸುತ್ತ ಮುತ್ತಲ ಪರಿಸರದಲ್ಲಿ ಸ್ಥಳೀಯ ಗಿಡ/ಮರಗಳ ಬಿತ್ತೋತ್ಸವ ಕಾರ್ಯಕ್ರಮ ನಡೆಯಿತು . ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು .

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.