ನಾಲ್ಕೂರು ಗ್ರಾಮದ ಹಾಲೆಮಜಲಿನಲ್ಲಿರುವ ಶ್ರೀ ವೆಂಕಟೇಶ್ವರ ಸಭಾಭವನದ ಮಾಲಕ ಯತಿಂದ್ರ ಕಟ್ಟೆ ಕೋಡಿಯವರ ವತಿಯಿಂದ ‘ಕದಂಬ ಕೌಶಿಕೆ’ ಎಂಬ ಯಕ್ಷಗಾನ ಪ್ರದರ್ಶನ ಮಾಡಲಾಯಿತು.
ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ ಕಲಾಕ್ಷೇತ್ರ ಪಂಜದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಯಕ್ಷ ಮಣಿ ಗಿರೀಶ್ ಗಡಿಕಲ್ ಅವರು ನಿರ್ದೇಶಿಸಿದರು. ಯಕ್ಷಗಾನಕ್ಕೆ ಮೊದಲು ಸ್ಥಳೀಯ ಮಹಿಳಾ ಭಜನಾ ತಂಡದವರು ಭಜನೆ ಸಂಕೀರ್ತನೆ ಹಾಡಿದರು. ಯತೀಂದ್ರರವರು ಆಗಮಿಸಿದ ಎಲ್ಲರಿಗೂ ಭೋಜನ ವ್ಯವಸ್ಥೆಯನ್ನು ಮಾಡಿದರು. (ವರದಿ: ಡಿ.ಹೆಚ್.)