ಶ್ರೀ ಜ್ಞಾನ ಮಂದಾರ ಟ್ರಸ್ಟ್ ರಿ. ಬೆಂಗಳೂರು ಇದರ ವತಿಯಿಂದ ನೀಡಲ್ಪಟ್ಟ ಮಾಧ್ಯಮ ವಿಭಾಗದಿಂದ ಸಮಾಜ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತಗೊಂಡ ಪತ್ರಕರ್ತ ಹಸೈನಾರ್ ಜಯನಗರ ರವರ ಮನೆಗೆ ಸುಳ್ಯ ಗಾಂಧಿನಗರ ಉದ್ಯಮಿಗಳು ಭೇಟಿ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ನಿಕಟಪೂರ್ವ ಸದಸ್ಯ ಹಾಜಿ ಮುಸ್ತಫಾ ಜನತಾ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಜನತಾ ಗ್ರೂಪ್ ಉದ್ಯಮಿಗಳಾದ ರೊ.ಅಬ್ದುಲ್ ಹಮೀದ್ ಜನತಾ,ರಿಜ್ವಾನ್ ಜನತಾ, ಉದ್ಯಮಿಗಳಾದ ಕೆ ಬಿ ಇಬ್ರಾಹಿಂ, ಅಬ್ದುಲ್ ಖಾದರ್ ಕರಾವಳಿ ಮೊದಲಾದವರು ಉಪಸ್ಥಿತರಿದ್ದರು.