ಮಕ್ಕಳ ಬೆಳವಣಿಗೆಗೆ ಪೂರಕವಾಗುವ ಕಾರ್ಯಕ್ರಮ : ಎಸ್ ಪಿ ಮಹಾದೇವ್
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಮತ್ತು
ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಜಂಟಿ ಆಶ್ರಯದಲ್ಲಿ “ಪುಟಾಣಿ ಗಳಿಗಾಗಿ ಒಂದು ದಿನ “ಎಂಬ ಶೀರ್ಷಿಕೆಯಲ್ಲಿ “ಸಜ್ಜನ ಚಿಣ್ಣರ ಮೇಳ “ ಕಾರ್ಯಕ್ರಮ ಜೂ.5 ರಂದು ಸಜ್ಜನ ಗೂನಡ್ಕ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವು ಪುಟಾಣಿಗಳಿಂದಲೇ ಡೋಲು ಬಾರಿಸುವ ಮೂಲಕ ಉದ್ಘಾಟನೆ ಮಾಡಿಸಲಾಯಿತು.
ನಂತರ ಅಂತರಾಷ್ಟ್ರೀಯ ತರಬೇತುದಾರ ವಿಕ್ರಮ್ ಸಾಗರ್ ಸೆಕ್ಸೆನಾ ಪುಟಾಣಿಗಳನ್ನು ಮನರಂಜಿಸಿ ತರಬೇತಿ ನೀಡಿದರು.
ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷ ಜಿ.ಕೆ ಹಮೀದ್, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ ಶಹೀದ್, ಗ್ರಾ.ಪಂ ಸದಸ್ಯ ಎಸ್ ಕೆ ಹನೀಫ್,ಸಜ್ಜನ ಪ್ರತಿಷ್ಠಾನ ನಿರ್ದೇಶಕ ಹಾರಿಸ್ ಫಾರ್ಮೆಡ್ ಗ್ರೂಪ್ಸ್ ,ಮಹಮ್ಮದ್ ಕುಂಞಿ ಗೂನಡ್ಕ, ತೆಕ್ಕಿಲ್ ಶಾಲೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನಕರ ಶ್ರೀ ಶಾರದಾ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತರ,ಅಧ್ಯಕ್ಷ ರಾಮಚಂದ್ರ ಕಲ್ಲುಗದ್ದೆ ಉಪಸ್ಥಿತರಿದ್ದರು
“ಮಕ್ಕಳನ್ನು ಇಳಿವಯಸ್ಸಿನಲ್ಲೂ ಉತ್ತಮ ರೀತಿಯಲ್ಲಿ ಸಂಸ್ಕಾರಯುತವಾಗಿ
ಮಾತ್ರ ತಂದೆ ತಾಯಿ ಗುಣ ಸಿಗುವುಂತ ಮಕ್ಕಳಾಗಿ ಬೆಳಯಲು ಸಾಧ್ಯ ಮಾದರಿ ಮಕ್ಕಳನ್ನಾಗಿ ಬೆಳಸಲು ಈಗಿನ ಕಾಲದಲ್ಲಿ ಇಂತಹ ಚಿಣ್ಣರ ಒಗ್ಗೂಡಿಸಿ ಅವರ ಬೆಳವಣಿಗೆಯಲ್ಲಿ ಉತ್ತಮ ನಡವಳಿಕೆಯನ್ನು ಕಲಿಸುವಂತಹ ಚಿಣ್ಣರ ಮೇಳದಂತ ಕಾರ್ಯಕ್ರಮ ನಡೆಸುವುದು ತುಂಬಾ ಒಳ್ಳೆಯ ಕೆಲಸ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹಾದೇವ್ ಸಮಾರೋಪ ಸಮಾರಂಭದಲ್ಲಿ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರ ಸಜ್ಜನ ಬಳಗದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಜ್ಜನ ಪ್ರತಿಷ್ಠಾನದ ಪುಣಾಣಿಮಕ್ಕಳಿಗೆ ಗಿಫ್ಟ್ ವಿತರಿಸಲಾಯಿತು.
ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ಮಂಜುನಾಥ್ ಹಿರಿಯೂರು, ಶರೀಫ್ ಜಟ್ಟಿಪಳ್ಳ,ರಜಾಕ್ ಬೀಜದಕಟ್ಟೆ, ಸಲೀಂ ಪೆರಂಗೋಡಿ,ಹಸೈನಾರ್ ಪೆರಂಗೋಡಿ, ಕಬೀರ್ ಪೆರಂಗೋಡಿ, ಹಮೀದ್ ಬೀಜದಕಟ್ಟೆ ಮೊದಲಾದವರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಮಲಾಕ್ಷ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ ರಹೀಮ್ ಬೀಜದಕಟ್ಟೆ ವಂದಿಸಿದರು.