ಜೂ. 20 ರಂದು ಮುರುಳ್ಯದಲ್ಲಿ ನಡೆಯಲಿದೆ ಚಿಂತನಾ ಸಭೆ
ಉದ್ದೇಶವನ್ನು ಯಶಸ್ವಿಗೊಳಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಲಂಚ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಗ್ರಾಮಾಭಿವೃದ್ಧಿ ಗಾಗಿ ಗ್ರಾಮ ಮಟ್ಟದ ಸಮಿತಿ ರಚನೆಗೆ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಮುರುಳ್ಯ ಗ್ರಾ.ಪಂ. ವ್ಯಾಪ್ತಿಯ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮತ್ತು ಬೆಂಬಲಿಗರ ಸಭೆಯು ಜೂ.20ರಂದು ಸಮಹಾದಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಜೂ. 13ರಂದು ಸಮಹಾದಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಕು. ಜಾನಕಿ ಮುರುಳ್ಯ, ಸದಸ್ಯರಾದ ಸುಂದರ ಶೇರ ಪಾಪುತ್ತಡಿ, ಪಿ.ಎ. ಕರುಣಾಕರ ಹುದೇರಿ, ಪುಷ್ಪಲತಾ ಡಿ, ಮೋನಪ್ಪ ಅಲೇಕಿ, ಎಣ್ಮೂರು ಮುರುಳ್ಯ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಸಂತ ಹುದೇರಿ, ನಿರ್ದೇಶಕರಾದ ಪುರುಷೋತ್ತಮ ಕುಕ್ಕಟೆ, ಮಾನ್ಯಡ್ಕ ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೇದಪ್ಪ ಮಾನ್ಯಡ್ಕ, ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕಿ, ಮಾಜಿ ಜಿ.ಪಂ. ಸದಸ್ಯೆ ಕು. ಭಾಗೀರಥಿ ಮುರುಳ್ಯ, ನಿವೃತ್ತ ಅಂಚೆಪಾಲಕರಾದ ಎನ್.ಕೆ. ಸೀತಾರಾಮ ಗೌಡ, ಸುದ್ದಿ ಪ್ರತಿನಿಧಿ ಸಂಕಪ್ಪ ಸಾಲ್ಯಾನ್ ಸಭೆಯಲ್ಲಿ ಉಪಸ್ಥಿತರಿದ್ದು, ಲಂಚ ಭ್ರಷ್ಟಾಚಾರ ವಿರೋಧದ ಬಗ್ಗೆ ಚರ್ಚಿಸಿದರು. ಬ್ಯಾಂಕ್ ಆಫ್ ಬರೋಡ ನಿವೃತ್ತ ಮ್ಯಾನೇಜರ್ ಎಂ.ಎಸ್. ಚಂದ್ರಶೇಖರ್ ಸ್ವಾಗತಿಸಿ
ಸುದ್ದಿ ವರದಿಗಾರ ಈಶ್ವರ ವಾರಣಾಶಿ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸುದ್ದಿ ಚಾನೆಲ್ ನಿರೂಪಕಿ ದಯಾಮಣಿ ಹೇಮಂತ್ ಸಹಕರಿಸಿದರು.