ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ವರ್ತಕರ ಸಭಾಭವನದಲ್ಲಿ ಜೂ.14 ರಂದು ಜರುಗಿದ ವಿಶ್ವ ರಕ್ತದಾನಿಗಳ ದಿನ- 2022 ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ್ನು , ರಕ್ತದಾನಕ್ಕೆ ಹೆಚ್ಚು ಮಹತ್ವವನ್ನು ನೀಡಿ ರಕ್ತದಾನ ಮಾಡಿದ ಹಾಗೂ ರಕ್ತದಾನ ಮಾಡಲು ಪ್ರೇರೇಪಿಸುವ ಸದಸ್ಯರನ್ನು ಸನ್ಮಾನಿಸಿದರು.
ರಕ್ತದಾನದ ಪ್ರೋತ್ಸಾಹಕ ಜನಾರ್ದನ ನಾಗತೀರ್ಥ ,ಪಂಚಶ್ರೀ ಜೀವರಕ್ಷಕ ಅಂಬ್ಯುಲೆನ್ಸ್ ನ ಚಾಲಕ ಶಶಿದಾಸ್ ನಾಗತೀರ್ಥ , 25 ಕ್ಕೂ ಅಧಿಕವಾಗಿ ರಕ್ತದಾನ ಮಾಡಿದ ಸುಜಿತ್ ಪಂಬೆತ್ತಾಡಿ , “ಪಂಚಶ್ರೀ ರಕ್ತನಿಧಿ” ವಾಟ್ಸಪ್ ಗ್ರೂಪ್ ಅಡ್ಮಿನ್ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪವನ್ ಪಲ್ಲತ್ತಡ್ಕ ರವರನ್ನು ಗುರುತಿಸಿ ಸನ್ಮಾನಿಸಿದರು.