ನಿಮ್ಮ ಒಂದು ವೋಟ್ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಫಿನಾಲೆಗೆ ತಲುಪಿಸಲು ಸಹಾಯ ಮಾಡಬಲ್ಲದು
ಝೀ ಟಿ.ವಿ.ಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಕಳೆದ 2 ತಿಂಗಳುಗಳಿಂದ ಅದ್ಬುತ ಪ್ರದರ್ಶನ ನೀಡುತ್ತಿರುವ ಸುಳ್ಯದ ಮರ್ಕಂಜ ಗ್ರಾಮದ 5 ವರ್ಷದ ಪುಟಾಣಿ ಪ್ರಣನ್ಯ ಕೆ.ಆರ್.ಜೋಡಿ ಡೇಂಜರ್ ಝೋನ್ನಲ್ಲಿದ್ದು, ಜಯಗೊಳಿಸಲು ನಿಮ್ಮ ಪಾತ್ರವು ಅತೀ ಮುಖ್ಯವಾಗಿದೆ.
ದಿನೇ ದಿನೇ ಈ ಡ್ಯಾನ್ಸ್ ಶೋ ಕುತೂಹಲವನ್ನು ಹೆಚ್ಚಿಸುತ್ತಿದ್ದು ಪ್ರತಿಯೊಂದು ಸ್ಪರ್ಧಿಗಳ ಅಭಿಮಾನಿ ಬಳಗವನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಇನ್ನೇನು ಫಿನಾಲೆಗೆ ಕೆಲ ದಿನಗಳು ಬಾಕಿ ಇದ್ದು, ಈ ವಾರದ ಡೇಂಜರ್ ಝೋನ್ನಲ್ಲಿ ಪ್ರಣನ್ಯ ಕೆ.ಆರ್. ಹಾಗೂ ದಕ್ಷಿತ್ ಜೋಡಿಯ ಜೊತೆಗೆ 4 ಸ್ಪರ್ಧಿಗಳು ಇದ್ದಾರೆ. ಅಭಿಮಾನಿಗಳು ಅವರವರ ಇಷ್ಟದ ಸ್ಪರ್ಧಿಗಳಿಗೆ ವೋಟ್ ಹಾಕಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
https://youtube.com/shorts/u-QNhO75Wdc
ಹಾಗಾಗಿ ಸುಳ್ಯದ ಪ್ರತಿಬೆ ಪುಟಾಣಿ ಪ್ರಣನ್ಯ ಕೆ.ಆರ್.ಜೋಡಿಗೆ ನಿಮ್ಮ ಒಂದು ವೋಟ್ ಫಿನಾಲೆಗೆ ತಲುಪಿಸಲು ಸಹಾಯ ಮಾಡಬಲ್ಲದು.
ವೋಟ್ ಮಾಡಲು ಇಂದು ರಾತ್ರಿ ೮ ಗಂಟೆ ಕೊನೆಯ ಸಮಯವಾಗಿದ್ದು, type DAPR and send SMS to 57575 ಈ ಮೂಲಕ ಮಾಡಬಹುದಾಗಿದೆ. ಎಸ್ಎಮ್ಎಸ್ ಕಳುಹಿಸಿಲ್ಪಟ್ಟ ಕೂಡಲೇ ಝೀ ಕನ್ನಡದಿಂದ ನಿಮ್ಮ ಮತ ಖಾತ್ರಿ ಪಡಿಸಲಾಗಿದೆ ಎಂಬ ಸಂದೇಶ ಬರುತ್ತದೆ.