ಆಡಳಿತ ಮಂಡಳಿಯ ಜೊತೆ ಸಂವಾದ
ಸಂಘದ ಪ್ರಗತಿ -ಸಾಧನೆಗೆ ಮೆಚ್ಚುಗೆ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಬಾರ್ಡ್ ಅಧಿಕಾರಿಗಳ ಜೊತೆಗೆ ಕರ್ನೂಲ್ (ಆಂಧ್ರ ಪ್ರದೇಶ) ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿಯೋಗ ಜೂ.14.ರಂದು ಅಧ್ಯಯನ ಪ್ರವಾಸಕ್ಕೆ ಭೇಟಿ ನೀಡಿದರು.
ಮಂಗಳೂರು ನಬಾರ್ಡ್ ಡಿ.ಜಿ.ಯಂ ಗಣಪತಿ , ನಬಾರ್ಡ್ ಅಧಿಕಾರಿ ಶ್ರೀನಿವಾಸನ್ , ಮಂಗಳೂರು ನಬಾರ್ಡ್ ಡಿ.ಜಿ.ಯಂ. ಕೆ ಎಸ್ ರವಿ ನೇತೃತ್ವದಲ್ಲಿ ಕಾರ್ನೂಲ್ ಡಿ.ಸಿ .ಸಿ ಬ್ಯಾಂಕಿನ ಆಡಳಿತ ಮಂಡಳಿ 5 ಸದಸ್ಯರು ಹಾಗೂ ಕಾರ್ನೂಲ್ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಒಟ್ಟು 25 ಮಂದಿ ಅಧ್ಯಕ್ಷರುಗಳು,ನಿರ್ದೇಶಕರು ಸಂಘದ ಕಾರ್ಯಗಳನ್ನು ವೀಕ್ಷಿಸಿ ಸಂವಾದದಲ್ಲಿ ಪಾಲ್ಗೊಂಡು ಪಂಜ ಸಂಘದ ಸ್ಥಾಪನೆ , ಆಡಳಿತ ಮಂಡಳಿ, ಸದಸ್ಯರಿಗೆ ನೀಡುತ್ತಿರುವ ಸಾಲ ಸೌಲಭ್ಯಗಳ ,ರಸಗೊಬ್ಬರ ಮಾರಾಟ, ಮೊದಲಾದ ವಿಚಾರಗಳ ಕುರಿತು ಮಾಹಿತಿ ಸಂಗ್ರಹಿಸಿ ಸಂವಾದ ನಡೆಸಿದರು.ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸೇವೆಗಳು ಮತ್ತು ಸಂಘದ ಸಾಧನೆ-ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಪ್ರತಿನಿಧಿ ಪ್ರದೀಪ್ ಕೆ, ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ, ಪಂಜ ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಡಾ.ರಾಮಯ್ಯ ಭಟ್, ಸಂಘದ ನಿರ್ದೇಶಕರಾದ ಚಂದ್ರಶೇಖರಶಾಸ್ತ್ರಿ ಸಿ, ಶ್ರೀಕೃಷ್ಣಭಟ್ ಪಟೋಳಿ, ರಘುನಾಥ ರೈ ಕೆರೆಕ್ಕೋಡಿ, ವಾಚಣ್ಣ ಕೆರೆಮೂಲೆ, ಗಣೇಶ ಪೈ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಕಿಟ್ಟಣ್ಣ ಪೂಜಾರಿ ,ಮೋಹಿನಿ ಬೊಳ್ಮಲೆ, ಹೇಮಲತ ಚಿದ್ಗಲ್, ಮುದರ ಐವತ್ತೊಕ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ನಿಯೋಗ ಜಿಲ್ಲೆಯ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅಧ್ಯಯನ ಪ್ರವಾಸಕ್ಕೆ ಭೇಟಿ ನೀಡುತ್ತಿದ್ದು. ಆ ಪ್ರಯುಕ್ತ ಸುಳ್ಯ ತಾಲೂಕಿನಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿದ್ದಾರೆ.