ಹೆಣ್ಣು ಮಕ್ಕಳ ಹದಿಹರೆಯದ ಆರೋಗ್ಯ ಮತ್ತು ವೈಯಕ್ತಿಕ ಸ್ವಚ್ಛತೆ ಯ ಅರಿವು ಮೂಡಿಸುವ ಕಾರ್ಯಕ್ರಮ ಜೂನ್ 15ರಂದು ಸುಳ್ಯ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ನಡೆಯಿತು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ ಅವರು ಮಾತನಾಡಿ ಹದಿಹರೆಯದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಾಳಜಿಯನ್ನು ವಹಿಸುವುದು ಅತ್ಯoತ ಅಗತ್ಯವಾಗಿದೆ.

ಹದಿಹರೆಯದಲ್ಲಿ ಹೆಣ್ಣು ಮಕ್ಕಳಲ್ಲಿ ಆಗುವ ದೈಹಿಕ,ಮಾನಸಿಕ ಬದಲಾವಣೆಗಳ ಬಗ್ಗೆ ಅರಿವನ್ನು ಹೊಂದಿ ಪೌಷ್ಟಿಕ ಆಹಾರ ಸೇವನೆ,ವೈಯಕ್ತಿಕ ಸ್ವಚ್ಛತೆ,ಕ್ರಮಬದ್ಧವಾದ ದಿನಚರಿಗಳ ಮೂಲಕ ಆರೋಗ್ಯ ವನ್ನು ಹೊಂದಬೇಕು. ಭಾವನೆಗಳ ಮೇಲೆ ನಿಯಂತ್ರಣ ಹೊಂದಿ ನಮ್ಮ ಆಲೋಚನೆ,ಸ್ಪಷ್ಟ ಗುರಿ, ಉದ್ದೇಶ ಗಳೊಂದಿಗೆ ಮುಂದೆ ಸಾಗುವುದು ಉತ್ತಮ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಕಾರ್ಯಕ್ರಮ ದಲ್ಲಿ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಮತ್ತು ಉಪನ್ಯಾಸಕಿಯರು ಉಪಸ್ಥಿತರಿದ್ದರು.
