ಶ್ರೀ ಜ್ಞಾನ ಮಂದಾರ ಟ್ರಸ್ಟ್.ರಿ. ಬೆಂಗಳೂರು ಇದರ ವತಿಯಿಂದ ಮಾಧ್ಯಮ ವಿಭಾಗದಿಂದ ಸಮಾಜ ರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾದ ಹಸೈನಾರ್ ಜಯನಗರ ರವರಿಗೆ ಜೂನ್ 15ರಂದು ಸುಳ್ಯ ಹಳೆಗೇಟು ಶೈನಿಂಗ್ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ರಂಜಿತ್ ಕುಮಾರ್ ಕೆ ಆರ್, ಕಾರ್ಯದರ್ಶಿ ಶಿಯಾಬುದ್ದೀನ್,ಉಪಾಧ್ಯಕ್ಷರು ಬಶೀರ್ ಕೆಎಂ,ಕೋಶಾಧಿಕಾರಿ ನೌಶಾದ್,ಜೊತೆ ಕಾರ್ಯದರ್ಶಿ ಅಲ್ತಾಫ್ ಜಯನಗರ, ಸಂಘದ ಸದಸ್ಯರುಗಳಾದ ನಾಸೀರ್ ಎಚ್ ಎಲ್ ಎಸ್,ಬದ್ರುದ್ದೀನ್, ನಾಸಿರ್ ಡಿಎಚ್,ಸಲೀಂ, ಆಸಿಫ್ ಸ್ಟಾರ್, ಉಸ್ಮಾನ್ ಹಿರಿಯರಾದ ಹನೀಫ್, ಅಬ್ಬಾಸ್ ಜೂನಿಯರ್ ಸೀಫುಡ್ ಮೊದಲಾದವರು ಉಪಸ್ಥಿತರಿದ್ದರು.
ರಂಜಿತ್ ಕುಮಾರ್ ಸ್ವಾಗತಿಸಿ ವಂದಿಸಿದರು.