ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಬೆಸ್ಟ್ ಕಾಂಪ್ಲೆಕ್ಸ್ ನಲ್ಲಿ ಅರುಣ್ ಕುಮಾರ್ ಮುಂಡಾಜೆ ರವರ ಮಾಲಕತ್ವದ ಶ್ರೀ ಚೊಕ್ಕಾಡಿ ಹೋಮ್ ಅಪ್ಲಾಯನ್ಸ್ ಗ್ಯಾರೇಜ್ ಜೂ.9 ರಂದು ಶುಭಾರಂಭಗೊಂಡಿದೆ.
ಪುರೋಹಿತ್ ರಾಧಾಕೃಷ್ಣ ಭಟ್ ಗಣಪತಿ ಹವನ ನೆರವೇರಿಸಿದರು. ಹಿರಿಯರಾದ ಬಾಲಕೃಷ್ಣ ಪರ್ಮಲೆ ಮತ್ತು ಶ್ರೀಮತಿ ದಮಯಂತಿ ಯವರು ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಕೇಶವ ಕರ್ಮಾಜೆ,ಉಪಾಧ್ಯಕ್ಷ ಪ್ರವೀಣ್ ಎಸ್.ರಾವ್, ನಿರ್ದೇಶಕ ರಾಧಾಕೃಷ್ಣ ಬೊಳ್ಳೂರು, ಅರುಣ್ ನಾಯರ್ ಕಲ್ಲು,ಉಮೇಶ್ ಚಿಲ್ಪಾರು, ನಿರಂಜನ, ರಘುರಾಮ,ಕುಮಾರ ಬೆಳ್ಚಪ್ಪಾಡ, ಪಂ.ಸದಸ್ಯ ರಾಧಾಕೃಷ್ಣ ಕೊರತ್ಯಡ್ಕ, ಜನಾರ್ದನ ಪೈಲೂರು,ಸೊಸೈಟಿ ಮಾಜಿ ಅಧ್ಯಕ್ಷ ರಾಘವೇಂದ್ರ ಪಿ.ಕೆ, ಬಾಲಕೃಷ್ಣ ಬೊಳ್ಳೂರು,
ಸೊಸೈಟಿ ಸಿ.ಇ.ಒ.ಮೋಹನ್ ಕುಮಾರ್, ಮೂಕಾಂಬಿಕಾ ಹೋಟೆಲ್ ಮಾಲಕರಾದ ಅನಿತಾ ಮಂಜುನಾಥ,ಲಕ್ಷ್ಮಣ ಕುಂಟಿನಿ, ಕಾಂಪ್ಲೆಕ್ಸ್ ಮಾಲಕ ಲಕ್ಷ್ಮೀಶ ಬೊಳ್ಳೂರು ಉಪಸ್ಥಿತರಿದ್ದು ಶುಭ ಹಾರೈಸಿದರು.ಎಲ್ಲಾ ತರದ ವಿದ್ಯುತ್ ಉಪಕರಣಗಳ ದುರಸ್ತಿ ಹಾಗೂ ಮೋಟಾರ್ ರಿವೈಂಡಿಂಗ್ ಕೆಲಸಮಾಡಿಕೊಡಲಾಗುವುದು. ಮಿಕ್ಸಿ, ಗ್ರೈಂಡರ್, ಫ್ಯಾನ್ ಗಳನ್ನು ಕ್ಲಪ್ತ ಸಮಯದಲ್ಲಿ ದುರಸ್ತಿ ಪಡಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದರು.