ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ನಿಕಟಪೂರ್ವ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆಯವರ ತೋಟದಲ್ಲಿ 4.5 ಕೆ.ಜಿ. ತೂಕದ ಸೊರೆಕಾಯಿ ಬೆಳೆದು ಅಚ್ಚರಿ ಮೂಡಿಸಿದೆ.
ಸುಮಾರು 1 ಮೀಟರ್ ಗಿಂತಲೂ ಹೆಚ್ಚು ಉದ್ದ ಬೆಳೆದ ಈ ತರಕಾರಿಯನ್ನು ಅಶೋಕ್ ನೆಕ್ರಾಜೆಯವರು ತಮ್ಮ ಮನೆಯ ಸಮೀಪ ಸಾವಯವ ಗೊಬ್ಬರ ಮಾತ್ರ ಹಾಕಿ ಬೆಳೆದಿರುವುದಾಗಿ ತಿಳಿಸಿದ್ದಾರೆ. ಸೊರೆಕಾಯಿಯನ್ನು ಹಿಡಿದುಕೊಂಡವರು ಅಶೋಕ್ ನೆಕ್ರಾಜೆ ಮತ್ತು ಸುಳ್ಯದ ಸಿ.ಡಿ.ಪಿ.ಒ. ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆಯವರ ಪುತ್ರ ಸೃಜನ್ ಎನ್.ಎ.