ಸುಳ್ಯ ನಗರ ಪಂಚಾಯತ್ನಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಪೋಷಣಾ ಭತ್ಯೆ ಚೆಕ್ ವಿತರಣಾ ಕಾರ್ಯಕ್ರಮ ಜೂ. ೧೬ ರಂದು ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಿಕಲಚೇತನ ಫಲಾನುಭವಿಗಳಿಗೆ ಚೆಕ್ ನೀಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ನಗರ ಪಂಚಾಯತ್ ಮುಖ್ಯಧಿಕಾರಿ ಸುಧಾಕರ್ ಎಂ ಹೆಚ್., ನಗರ ಪಂಚಾಯತ್ ನ ಸದಸ್ಯ ರಾದ ಶರೀಫ್ ಕಂಠಿ. ಪ್ರವೀತಾ ಪ್ರಶಾಂತ, ಬುದ್ಧ ನಾಯ್ಕ್, ಸರೋಜಿನಿ ಪೆಲ್ತಡ್ಕ, ಶೀಲಾ ಕುರುಂಜಿ, ಕಿಶೋರಿ ಶೇಟ್, ಬಾಲಕೃಷ್ಣ ಭಟ್, ಸುಧಾಕರ್, ವಿಕಲ ಚೇತನ ಇಲಾಖೆಯ ಮೇಲ್ವಿಚಾರಕ ಪ್ರವೀಣ್ ನಾಯಕ್, ಪಂಚಾಯತ್ ಸಿಬ್ಬಂದಿ ತಿಮ್ಮಪ್ಪ ಪಾಟಾಳಿ, ಜಯಲತಾ ಮತ್ತು ಇತರ ವಿಕಲಚೇತನ ಫಲಾನು ಭವಿಗಳು ಹಾಜರಿದ್ದರು.