ಸವಣೂರಿನ ಶಿಲ್ಪಿ, ಸಹಕಾರಿ, ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸವಣೂರು ಸೀತಾರಾಮ ರೈಯವರ “ಅಮೃತ ರಶ್ಮಿ” 75ನೇ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಭಾರತೀಯ ಅಂಚೆ ಇಲಾಖೆಯ “ ಮೈಸ್ಟಾಂಪ್” ಅಂಚೆ ಚೀಟಿಯನ್ನು ಕೊಡುಗೆಯಾಗಿ ನೀಡಲಾಯಿತು.
ಸುಳ್ಯ ವರ್ತಕರ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದ.ಕ ಮತ್ತು ಉಡುಪಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾದ್ಯಕ್ಷ ಕೆ.ಎಂ ಮುಸ್ತಫಾ, ಉದ್ಯಮಿಗಳಾದ ಜನತಾ ಗ್ರೂಪ್ಸ್ ರೊ. ಅಬ್ದುಲ್ ಹಮೀದ್, ಅಬ್ದುಲ್ ಮಜೀದ್ ಜನತಾ ಉಪಸ್ಥಿತರಿದ್ದರು.