ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋಧ್ಯಮಿಗಳ ಸಂಘದ ವತಿಯಿಂದ ೭೫ನೇ ಹುಟ್ಟು ಹಬ್ಬ ಆಚರಿಸುತ್ತಿರುವ ಮೂವರು ಸಾಧಕರುಗಳಾದ ಸವಣೂರು ಸೀತಾರಾಮ ರೈ, ರೊ. ಪಿ. ರಾಮಚಂದ್ರ ಭಾರತ್ ಆಗ್ರೋ, ಮತ್ತು ಹಿರಿಯ ಸಿವಿಲ್ ಇಂಜಿನಿಯರ್ ಡಿ. ಎಂ ಸುಮಿತ್ರ ಇವರನ್ನು ಸನ್ಮಾನಿಸಲಾಯಿತು.
ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರೂ ಹಿರಿಯ ಸಹಕಾರಿ ಧುರೀಣರೂ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ಸವಣೂರು ಕೆ ಸೀತಾರಾಮ ರೈ, ಸುಳ್ಯದಲ್ಲಿ ೫ ದಶಕಗಳಿಂದ ಕೃಷಿ ಮತ್ತು ನೀರಾವರಿಯ ಸಾಮಾಗ್ರಿಗಳ ಉದ್ಯಮ ನಡೆಸಿ ರೋಟರಿ ಮೂಲಕ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪಕಾಧ್ಯಕ್ಷರಾಗಿ, ಓಡಬÊಾ ಇನ್ಫೋಸಿಸ್ ತೂಗು ಸೇತುವೆಯ ಯೋಜನಾ ನಿರ್ದೇಶಕರಾಗಿ ರೋಟರಿ ಸಂಸ್ಥೆಯ ಮಹಾದಾನಿಯಾಗಿ ಹಲವು ಪ್ರಶಸ್ತಿಗಳನ್ನು ಪಡೆದ ಹಿರಿಯ ಸಮಾಜಸೇವಕ ಸುಳ್ಯದ ಭಾರತ್À ಆಗ್ರೋ ಸಂಸ್ಥೆಯ ಮಾಲಕ ರೊ. ಪಿ ರಾಮಚಂದ್ರ ಹಾಗೂ ೧೯೬೬ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಗೋವಾ, ಇರಾನ್ ಇನ್ನಿತರ ಕಡೆ ಸೇವೆ ಸಲ್ಲಿಸಿ ಮಾನವ ಧರ್ಮದ ಚಿಂತಕರಾಗಿ, ಪ್ರಗತಿಪರ ಕೃಷಿಕರಾಗಿ ಸೇವೆಸಲ್ಲಿಸಿದ ಡಿ.ಎಂ ಸುಮಿತ್ರಾ ಇಂಜಿನಿಯರ್ ಇವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞ, ನಿವೃತ್ತ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಸಾಧಕರನ್ನು ಸನ್ಮಾನಿಸಿದರು. ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಂ ಮುಸ್ತಫ ಅಭಿನಂದನಾ ಭಾಷಣಗೈದರು.ಸಂಘದ ಪದಾಧಿಕಾರಿ ಬಿ.ಎಸ್ ಗಿರೀಶ್ ಸ್ವಾಗತಿಸಿ ಧನ್ಯವಾದ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಉಪಸ್ಥಿತರಿದ್ದರು. ವಿವಿಧ ಸಂಘ – ಸಂಸ್ಥೆಗಳ ಪರವಾಗಿ ತೆಕ್ಕಿಲ್ ಪ್ರತಿಷ್ಠಾನದ ಟಿ.ಎಂ ಶಾಹಿದ್, ಗಣೇಶ್ ಪ್ರಿಂರ್ಸ್ ಮಾಲಕ ಪಿ. ಕೆ ಉಮೇಶ್, ಉದ್ಯಮಿ ಗಣಪ ಶೀತಲ್, ಧನಂಜಯ ಅಡ್ಪಂಗಾಯ, ರೂಪಾ ಸುಂದರ್, ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಚಂದ್ರಶೇಖರ ರಾವ್ ಸೆಂಚುರಿ ಮೊದಲಾದವರು ಗೌರವಿಸಿದರು.