ಅರಂತೋಡು ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ನೂತನ ಪ್ರವೇಶದ್ವಾರದ ಉದ್ಘಾಟನೆ ಜೂ. 15 ರಂದು ನಡೆಯಿತು. ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.
ಅಳಿಕೆ ಕುಟುಂಬದ ಹಿರಿಯವರಾದ ಶ್ರೀಮತಿ ಭಾರತಿ ರಾಮಣ್ಣ ಮಕ್ಕಟ್ಟಿ ಅಳಿಕೆಯವರು ಪ್ರವೇಶದ್ವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರವೇಶದ್ವಾರದ ದಾನಿಗಳಾದ ಶ್ರೀಮತಿ ರತ್ನಾವತಿ ಹರಿಶ್ಚಂದ್ರ ಅಳಿಕೆ, ಶ್ರೀಪಾವನ ಮತ್ತು ಜಯಶೀಲ ಅಳಿಕೆರವರು ಉಪಸ್ಥಿತರಿದ್ದರು.
ನಂತರ ದೈವಸ್ಥಾನದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನ ಹಾಗೂ ಊರಿನ ಸಮಸ್ತರ ಪರವಾಗಿ ಹರಿಶ್ಚಂದ್ರರವರ ಧರ್ಮಪತ್ನಿ ಶ್ರೀಮತಿ ರತ್ನಾವತಿರವರನ್ನು ಸನ್ಮಾನಿಸಲಾಯಿತು. ಹಾಗೂ ಅಳಿಕೆ ಕುಟುಂಬದ ಹಿರಿಯರಾದ ಶ್ರೀಮತಿ ಭಾರತಿ ರಾಮಣ್ಣ, ಪಾವನ ಅಳಿಕೆ, ಜಯಶೀಲ ಅಳಿಕೆರವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರದ ಸ್ಥಾನಿಕರಾದ ಶ್ರೀಮತಿ ವಾರಿಜ ಕೊಡಂಕೇರಿ, ಗುರುವಪ್ಪ ಕೊಡಪಾಲ, ಗಿರಿಧರ ಕೊಡಂಕೇರಿ, ಅರಂತೋಡು ಗ್ರಾಮ ಪಂಚಾಯತ್ನ ಸದಸ್ಯರಾದ ಪುಷ್ಪಾಧರ ಕೊಡಂಕೇರಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಿದಾನಂದರವರು ನಿರೂಪಿಸಿ, ಶಿಕ್ಷಕರಾದ ಭಾನುಪ್ರಕಾಶ್ ಕೊಡಂಕೇರಿರವರು ದಾನಿಗಳ ಕುರಿತು ಮಾತನಾಡಿ ಎಲ್ಲರನ್ನು ಸ್ವಾಗತಿಸಿ, ವಂದನಾರ್ಪಣೆಗೈದರು.
ಈ ಸಂದರ್ಭದಲ್ಲಿ ಊರಿನ, ಪರಊರಿನ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು ನಂತರ ಸಂಕ್ರಮಣ ಪೂಜೆ, ಅನ್ನಸಂತರ್ಪಣೆ ನಡೆಯಿತು.