ಸುಳ್ಯ ನಗರದಲ್ಲಿ ನೂತನ ಐಸ್ ಕ್ರೀಂ ಪಾರ್ಲರೊಂದು ಇಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ. ಸುಳ್ಯ ಶ್ರೀರಾಂಪೇಟೆಯಲ್ಲಿ ಶ್ರೀ ರಾಮ ಭಜನಾ ಮಂದಿರದ ಎದುರುಗಡೆ , ರಾಜೇಶ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಮೀಪ ಕುರುಂಜಿಕಾರ್ಸ್ ವಿಶ್ವ ಸೆಂಟ್ರಲ್ ಬಿಲ್ಡಿಂಗ್ ನಲ್ಲಿ ಯುವ ಉದ್ಯಮಿ ಸತೀಶ್ ಹಂಡನಮನೆ ಕಾನತ್ತಿಲ ಜಟ್ಟಿಪಳ್ಳ ಇವರು ಸ್ಥಾಪಿಸಿರುವ ಸ್ಕೂಪ್ ಹೆಸರಿನ ಈ ಐಸ್ ಕ್ರೀಂ ಮಳಿಗೆಯನ್ನು ಇಂದು ಬೆಳಿಗ್ಗೆ 9.30 ಕ್ಕೆ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಉದ್ಘಾಟಿಸುವರು.
ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹಾಗೂ ಕಟ್ಟಡ ಮಾಲಕ ಜಯಪ್ರಕಾಶ್ ಕೆ.ವಿ. ಮುಖ್ಯಅತಿಥಿಗಳಾಗಿರುವರು.
ಸ್ಕೂಪ್ ಐಸ್ ಕ್ರೀಂ ಪಾರ್ಲರ್ ನಲ್ಲಿ ವಿವಿಧ ಬಗೆಯ ಐಸ್ ಕ್ರೀಂಗಳಲ್ಲದೆ ಶುಚಿ ರುಚಿಯಾದ ಬಗೆಬಗೆಯ ಚಾಟ್ಸ್ ಐಟಂಗಳು ಇರುವುದಾಗಿ ಸ್ಕೂಪ್ ಮಾಲಕ ಸತೀಶ್ ರವರು ತಿಳಿಸಿದ್ದಾರೆ.