ಗ್ರಾಮದಲ್ಲಿ ಕಾವಲು ಸಮಿತಿ ರಚನೆಗೆ ನಿರ್ಧಾರ – ಜೂ.23 ರಂದು ಗ್ರಾಮ ಮಟ್ಟದ ಸಭೆ
ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮ ಹಾಗೂ ಗ್ರಾಮಾಭಿವೃದ್ಧಿಯ ಚಿಂತನಾ ಸಭೆ ಅಮರಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂ.16 ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಚೊಕ್ಕಾಡಿ ಸಹಕಾರ ಸಂಘದ ಅಧ್ಯಕ್ಷ ಕೇಶವ ಕರ್ಮಜೆ, ಪಂಚಾಯತ್ ಸದಸ್ಯರುಗಳಾದ ಅಶೋಕ್ ಚೂಂತಾರು, ದಿವ್ಯ ಮಡಪ್ಪಾಡಿ, ವೆಂಕಟ್ರಮಣ ಇಟ್ಟಿಗುಂಡಿ, ರಾಧಾಕೃಷ್ಣ ಗೌಡ, ಎ.ಹೂವಪ್ಪ ಗೌಡ ಆರ್ನೋಜಿ,ಸೊಸೈಟಿ ನಿರ್ದೇಶಕ ಅರುಣ್ ಕುಮಾರ್ ಮುಂಡಾಜೆ, ಮಾಜಿ ನಿರ್ದೇಶಕ ಗಣೇಶ್ ಪಿಲಿಕಜೆ, ಕುಸುಮಾಧರ ಕಾನಡ್ಕ, ಪಂ.ಗ್ರಂಥಪಾಲಕ ಸಂತೋಷ್ ಮುಂಡಕಜೆ,ಸಿಬ್ಬಂದಿ ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಸುಕುಮಾರಿ ಉಪಸ್ಥಿತರಿದ್ದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಬಳಿಕ ಚರ್ಚೆ ನಡೆದು ಗ್ರಾಮ ಮಟ್ಟದಲ್ಲಿ ಲಂಚ ಭ್ರಷ್ಟಾಚಾರ ನಿರ್ಮೂಲನಾ ಜಾಗೃತ ಸಮಿತಿ ರಚನೆ ಮಾಡುವುದು ಮತ್ತು ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಇರಲಿ, ತಾಲೂಕು ಮಟ್ಟದಲ್ಲೇ ಇರಲಿ ಸಾರ್ವಜನಿಕರಿಗೆ ಕೆಲಸಕ್ಕೆ ಲಂಚಕ್ಕೆ ಬೇಡಿಕೆ ಇಟ್ಟರೆ ಆ ರೀತಿಯ ದೂರು ಕಾವಲು ಸಮಿತಿ ಮುಂದೆ ಬಂದಾಗ ಎಲ್ಲರೂ ಒಟ್ಟಾಗಿ ಹೋಗಿ ಅಧಿಕಾರಿಯನ್ನು ವಿಚಾರಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಕಾವಲು ಸಮಿತಿಯ ಘೋಷಣೆ ಹಾಗೂ ಗ್ರಾಮ ಮಟ್ಟದ ಸಭೆಯಲ್ಲಿ ಜೂ.23 ರಂದು ಪಂಚಾಯತ್ ಸಭಾಂಗಣದಲ್ಲಿ ಕರೆಯುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಸುದ್ದಿ ವರದಿಗಾರ ಶಿವಪ್ರಸಾದ್ ಕೇರ್ಪಳ, ಪ್ರಜ್ಞಾ ಎಸ್.ನಾರಾಯಣ ಅಚ್ರಪ್ಪಾಡಿ ಸಹಕರಿಸಿದರು.
ಸುದ್ದಿ ವರದಿಗಾರ ಈಶ್ವರ ವಾರಣಾಸಿ ವಂದಿಸಿದರು.