ಸುಳ್ಯ ನಗರದ ಶ್ರೀರಾಮಪೇಟೆಯಲ್ಲಿ ಸ್ಕೂಪ್ ಎಂಬ ಹೆಸರಿನ ನೂತನ ಐಸ್ ಕ್ರೀಂ ಪಾರ್ಲರ್ ಇಂದು ಬೆಳಿಗ್ಗೆ ಶುಭಾರಂಭಗೊಂಡಿದೆ.
ಶ್ರೀರಾಂಪೇಟೆಯಲ್ಲಿ ಶ್ರೀ ರಾಮ ಭಜನಾ ಮಂದಿರದ ಎದುರುಗಡೆ , ರಾಜೇಶ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಮೀಪ ಕುರುಂಜಿಕಾರ್ಸ್ ವಿಶ್ವ ಸೆಂಟ್ರಲ್ ಬಿಲ್ಡಿಂಗ್ ನಲ್ಲಿ ಯುವ ಉದ್ಯಮಿ ಸತೀಶ್ ಹಂಡನಮನೆ ಕಾನತ್ತಿಲ ಜಟ್ಟಿಪಳ್ಳ ಇವರ ಮಾಲಕತ್ವದಲ್ಲಿ ಆರಂಭಗೊಂಡ ಈ ಐಸ್ ಕ್ರೀಂ ಪಾರ್ಲರನ್ನು ಇಂದು ಬೆಳಿಗ್ಗೆ 9.30 ಕ್ಕೆ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಸತೀಶ್ ಹಂಡನಮನೆಯವರ ತಾಯಿ ಶ್ರೀಮತಿ ರತ್ನಾವತಿ ಹಾಗೂ ಚಿಕ್ಕಮ್ಮ ಶ್ರೀಮತಿ ಸುಶೀಲ ದೀಪ ಬೆಳಗಿ ಶುಭಹಾರೈಸಿದರು. ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹಾಗೂ ಕಟ್ಟಡ ಮಾಲಕ ಜಯಪ್ರಕಾಶ್ ಕೆ.ವಿ. ಮುಖ್ಯಅತಿಥಿಗಳಾಗಿದ್ದು ಶುಭಹಾರೈಸಿದರು.
ಶ್ರೀಮತಿ ಸವಿತಾ ಸತೀಶ್ ಕಾನತ್ತಿಲ, ಕು.ಅದ್ವಿಕಾ ಜಯಪ್ರಕಾಶ್ ಕುರುಂಜಿ, ನ.ಪಂ.ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತ್ತಡ್ಕ, ನ.ಪಂ.ಸದಸ್ಯ ರಿಯಾಜ್ ಕಟ್ಟೆಕಾರ್, ಶ್ರೀಮತಿ ಭಾರತಿ ಬಂಟ್ವಾಳ್, ಶರೀಫ್ ಜಟ್ಟಿಪಳ್ಳ, ಸುಂದರ ಪೂಜಾರಿ ಕಾನತ್ತಿಲ, ರವಿ, ಪರಶುರಾಮ್, ಅಬೂಬಕ್ಕರ್, ತೀರ್ಥವರ್ಣ ಬಳ್ಳಡ್ಕ, ದಿವಾಕರ್, ಪ್ರಕಾಶ್ ಭಂಡಾರಿ ಕಾನತ್ತಿಲ, ಬೇಬಿ ತೃಷಾ ಮತ್ತು ಬೇಬಿ ಶಿರಿಷಾ, ಹಾಗೂ ಇನ್ನೂ ಹಲವರು ಉಪಸ್ಥಿತರಿದ್ದರು. ಸುದ್ದಿ ಬಿಡುಗಡೆಯ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸತೀಶ್ ಹಂಡನಮನೆ ಕಾನತ್ತಿಲ ವಂದಿಸಿದರು.
ಸ್ಕೂಪ್ ಐಸ್ ಕ್ರೀಂ ಪಾರ್ಲರ್ ನಲ್ಲಿ ವಿವಿಧ ಬಗೆಯ ಐಸ್ ಕ್ರೀಂಗಳಲ್ಲದೆ ಶುಚಿ ರುಚಿಯಾದ ಬಗೆಬಗೆಯ ಚಾಟ್ಸ್ ಐಟಂಗಳು ಇರುವುದಾಗಿ ಸ್ಕೂಪ್ ಮಾಲಕ ಸತೀಶ್ ರವರು ತಿಳಿಸಿದ್ದಾರೆ.