ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ನೂಜಿನಮೂಲೆ ಎಂಬಲ್ಲಿ ಜನಾರ್ದನ ನಾಯ್ಕ ರವರ ಮನೆಯ ಮುಂಬದಿ ನಿರ್ಮಿಸಿದ ತಡೆಗೋಡೆ ಕಳೆದ ರಾತ್ರಿ ಸಮಯದಲ್ಲಿ ಕುಸಿದ ಘಟನೆ ನಡೆದಿದೆ. ಮನೆಯ ಮುಂಭಾಗದಲ್ಲಿ ನೀರಿನ ತೋಡು ಇದ್ದು ಮನೆಯ ಮುಂಜಾಗ್ರತೆಗಾಗಿ ಕೆಂಪು ಕಲ್ಲು ಬಳಸಿ ತಡೆಗೋಡೆ ನಿರ್ಮಿಸಲಾಗಿತ್ತು.
ಇದೀಗ ಮಳೆಯ ಕಾರಣದಿಂದ ನೀರಿನ ಹರಿವು ಜಾಸ್ತಿಯಾಗಿ ಗೋಡೆಯ ತಳಭಾಗದಿಂದ ಕೊರತವಾಗಿ ಗೋಡೆ ಕುಸಿತವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರು ಭೇಟಿ ನೀಡಿರುತ್ತಾರೆ.