ಶ್ರೀ ಆದಿ ನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನ ಹಾಗೂ ಸ್ವಾಮಿ ಕೊರಗಜ್ಜ ಗೆಳೆಯರ ಬಳಗ ಕೊನ್ನಡ್ಕ ಇದರ ವತಿಯಿಂದ ಜೂ. 17ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಣ್ಣೆಮಜಲು ಇಲ್ಲಿಯ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಚಂದ್ರನಾಥ ಪಟೋಳಿ, ಮುಖ್ಯ ಶಿಕ್ಷಕಿ ಶಾಲಿನಿ, ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಕಿರಣ್ ಕೊನ್ನಡ್ಕ, ಗೆಳೆಯರ ಬಳಗದ ಅಧ್ಯಕ್ಷ ಬಾಲಕೃಷ್ಣ ಕೊನ್ನಡ್ಕ, ಉಪಾಧ್ಯಕ್ಷ ದೀಕ್ಷಿತ್ ಕೊನ್ನಡ್ಕ, ಕಾರ್ಯದರ್ಶಿ ವಿನೋದ್ ಕೊನ್ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೆಳೆಯರ ಬಳಗದ ಪಧಾದಿಕಾರಿಗಳಾದ ಯೋಗೀಶ್ ಕೊನ್ನಡ್ಕ, ಚೇತನ್ ಕೊನ್ನಡ್ಕ, ಚಿದಾನಂದ ಕೊನ್ನಡ್ಕ, ತಾರಾನಾಥ ಕೊನ್ನಡ್ಕ, ಶ್ರೇಯಸ್ ಕೊನ್ನಡ್ಕ,
ಷಅಭಿಲಾಷ್ ಕೊನ್ನಡ್ಕ, ಸತೀಶ್ ಕೊನ್ನಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ ಸ್ವಾಗತಿಸಿ ವಂದಿಸಿದರು.