ಪ್ರತಿಭೆಗಳು ಅವಕಾಶ ದೊರಕಿದಾಗ ಪ್ರತಿಭೆ ಹೊರಹೊ ಮ್ಮಿಸಬೇಕು ಆ ಮೂಲಕ ಎಲ್ಲರೂ ಕಲಿಕೆಯೊಂದಿಗೆ ಪಠ್ಯ ಪೂರಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾ oಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ ತಿಳಿಸಿದರು.
ಅವರು
ಸುಳ್ಯ ಎನ್ನೆ oಪಿಯುಸಿಯಲ್ಲಿ ನಡೆದ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿಗಳಾದ ದೀಕ್ಷಿತಾ ಆಚಾರ್ ಸ್ವಾಗತಿಸಿ,ಗೌತಮ್ ಪಿ ಕಾರ್ಯಕ್ರಮ ನಿರ್ವಹಿಸಿ,ವಂದಿಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ,ಸಾವಿತ್ರಿ ಕೆ.ಹಾಗೂ ಬೋಧಕ -ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.