Breaking News

ಲಂಚ ಭ್ರಷ್ಟಾಚಾರ ಮುಕ್ತವಾಗಿ ಗುತ್ತಿಗಾರು ಗ್ರಾ.ಪಂ. ಅಭಿವೃದ್ಧಿಗಾಗಿ ಚಿಂತನಾ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪ್ರಮುಖರೊಂದಿಗೆ ಸಮಾಲೋಚನೆಗೆ ನಿರ್ಧಾರ – 7 ಮಂದಿ ಸಂಚಾಲಕರ ಆಯ್ಕೆ

ಜೂ.23 ಸಭೆ ನಡೆಸಲು ನಿರ್ಧಾರ

ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮ ಹಾಗೂ ಗ್ರಾಮಾಭಿವೃದ್ಧಿಯ ಚಿಂತನಾ ಸಭೆ ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂ.16 ರಂದು ನಡೆಯಿತು.

 

 

ಗುತ್ತಿಗಾರು ಮತ್ತು ನಾಲ್ಕೂರು ಗ್ರಾಮಗಳನ್ನು ಲಂಚ, ಭ್ರಷ್ಟಾಚಾರ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲು ನಿರ್ಧರಿಸಿ, ಅದಕ್ಕಾಗಿ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರ ಇನ್ನೊಂದು ಸಭೆಯನ್ನು ಕರೆಯಲು ನಿರ್ಧರಿಸಿ 7 ಮಂದಿಯ ಸಂಚಾಲಕ ಸಮಿತಿಯನ್ನು ರಚಿಸಲಾಯಿತು. ಜೂ. 23 ರಂದು ಮುಂದಿನ ಸಭೆ ಕರೆಯಲು ನಿರ್ಧರಿಸಲಾಯಿತು.

ಲಂಚ ಭ್ರಷ್ಟಾಚಾರ ಮುಕ್ತವಾಗಿ ಗ್ರಾಮದ ಸಮಗ್ರ ಅಭಿವೃದ್ಧಿಯ ಚಿಂತನಾ ಸಭೆಯು ಗುತ್ತಿಗಾರು ಗ್ರಾ. ಪಂ. ಬಳಿಯ ಪ.ವರ್ಗ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಸುದ್ದಿ ಬಿಡುಗಡೆ ವಿತರಕ, ಗುತ್ತಿಗಾರು ಬಸ್ ತಂಗುದಾಣದ ಅಂಗಡಿಯ ಮಾಲಕ ಎನ್ ಎಲ್ ಈಶ್ವರ್, ಶ್ರೀ ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದ ಜಾತ್ರಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಪೈಕ ಬೊಮ್ಮದೇರ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷ ಎಚ್.ಬಿ.ಕೇಶವ ಹೊಸೊಳಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ, ಗುತ್ತಿಗಾರು ರಬ್ಬರ್ ಸೊಸೈಟಿಯ ನಿರ್ದೇಶಕ ಲೋಕೇಶ್ವರ ಡಿ. ಆರ್, ಗುತ್ತಿಗಾರು ಗ್ರಾ ಪಂ ಮಾಜಿ ಸದಸ್ಯ ಶ್ರೀಕಮಲ್ ರಬ್ಬರ್ ಏಜೆನ್ಸಿ ಮಾಲಕ ಬಿ.ಕೆ.ಶ್ರೀಧರ್, ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ಮಕರ ಸೌಹಾರ್ದ ಕ್ರೆಡಿಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪಾಲುದಾರ ವೆಂಕಟ್ರಮಣ ಕೆಂಬ್ರೋಳಿ, ಗುತ್ತಿಗಾರು ಲಯನ್ಸ್ ಕ್ಲಬ್ ಇದರ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಎಂ ಕೆ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ. ಕೆ ಹಿಮಕರ, ಗುತ್ತಿಗಾರು ಗ್ರಾ.ಪಂ ಸದಸ್ಯೆ
ಲತಾಕುಮಾರಿ ಆಜಡ್ಕ, ಗುತ್ತಿಗಾರು ಶ್ರೀ ದುರ್ಗಾ ಕಂಪ್ಯೂಟರ್‌ ಸೆಂಟರ್ ನ ಮಾಲಕಿ ದಿವ್ಯ ಗುಡ್ಡೆಮನೆ, ಗುತ್ತಿಗಾರು ರಬ್ಬರ್ ಸೊಸೈಟಿ ನಿರ್ದೇಶಕ ಹರೀಶ್ ಚಿಲ್ತಡ್ಕ, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಲಿಜೋ ಜೋಸ್, ಲೆಕ್ಕ ಪರಿಶೋಧಕ ಶ್ಯಾಮ ಹೊಸೋಳಿಕೆ, ಗುತ್ತಿಗಾರು ಬಸ್ ತಂಗುದಾಣದ ಅಂಗಡಿ ಮಾಲಕ ಎನ್.ಎಲ್.ಈಶ್ವರ್ , ಗ್ರಂಥಪಾಲಕಿ ಶ್ರೀಮತಿ ಅಭಿಲಾಷಾ ಉಪಸ್ಥಿತರಿದ್ದರು.

ಸುದ್ದಿಬಿಡುಗಡೆಯ
ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಸಭೆಯಲ್ಲಿದ್ದ
ಪ್ರತಿಯೋರ್ವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಸಭೆಯಲ್ಲಿ ಚರ್ಚಿಸಿ ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಮತ್ತು ಹಾಗೂ ಗ್ರಾಮಾಭಿವೃದ್ದಿಗೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳಿದ್ದು ಇನ್ನೊಂದು ಸಭೆಯನ್ನು ಕರೆಯುವುದಾಗಿ ಚರ್ಚಿಸಲಾಯಿತು. ಬಳಿಕ ಸಭೆಗೆ ಬಂದಿದ್ದವರಲ್ಲಿ 7 ಮಂದಿಯ ಸಂಚಾಲಕ ಸಮಿತಿಯನ್ನು ರಚಿಸಲಾಯಿತು.ಉಳಿದವರನ್ನು ಸದಸ್ಯರಾಗಿ ಆರಿಸಲಾಯಿತು. ಸಂಚಾಲಕರುಗಳಾಗಿ ಕಿಶೋರ್ ಕುಮಾರ್ ಪಿ.ಆರ್, ಎಚ್. ಬಿ. ಕೇಶವ ಹೊಸೊಳಿಕೆ, ಲತಾ ಕುಮಾರಿ ಆಜಡ್ಕ, ದಿವ್ಯಾ ಗುಡ್ಡೆಮನೆ, ವೆಂಕಟ್ರಮಣ ಕೇಂಬ್ರೋಳಿ, ಲೋಕೇಶ್ವರ ಡಿ.ಆರ್. ಮತ್ತು ಎನ್. ಎಲ್. ಈಶ್ವರ್ ಇರಲಿದ್ದಾರೆ.

ಜೂ.23 ರಂದು ಅಪರಾಹ್ನ ಜನಪ್ರತಿನಿಧಿಗಳು ಮತ್ತು ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಇನ್ನೊಂದು ಸಭೆಯನ್ನು ಕರೆಯಲು ನಿರ್ಧರಿಸಲಾಗಿದೆ.
ಸುದ್ದಿ ಬಿಡುಗಡೆಯ ಶಿವರಾಮ ಕಜೆಮೂಲೆ ಸ್ವಾಗತಿಸಿ ವಂದಿಸಿದರು. ದಯಾನಂದ ಕೊರೊತ್ತೋಡಿ, ಸುಹಾಸ್ ಸುಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.