ಸುಳ್ಯ ಬೆಳ್ಳಾರೆ ತಂಬಿನಮಕ್ಕಿ ನಿವಾಸಿ ರಶೀದ್ ಮುಸ್ಲಿಯಾರ್ ತಂಬಿನಮಕ್ಕಿ ಹೃದಯಾಘಾತದಿಂದ ಜೂ.18 ರಂದು ನಿಧನರಾದರು.
ಅವರಿಗೆ 51 ವರ್ಷ ವಯಸ್ಸಾಗಿತ್ತು.
ಮುಂಜಾನೆ ತಂಬಿನಮಕ್ಕಿ ಮನೆಯಿಂದ ಕಳಂಜ ಮಸೀದಿಗೆ ತೆರಳಿದ್ದರು ಬೆಳಿಗ್ಗೆ 7.30 ಕ್ಕೆ ಮದರಸ ತರಗತಿ ನಡೆಸುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದರು .
ಕೂಡಲೇ ಅವರನ್ನು ಪುತ್ತೂರು ಅಸ್ಪತ್ರೆ ಕೊಂಡೊಯ್ದರು ಮಾಡಾವು ತಲುಪಷ್ಟರಲ್ಲಿ ಅವರು ಮೃತಪಟ್ಟರೆನ್ನಲಾಗಿದೆ.
ಕಳಂಜ ಬುಖ್ಯಾರಿಯ ಮದರಸ ಖತೀಬರು ಅಸೌಖ್ಯದಿಂದ ರಜೆಯಲ್ಲಿದ್ದ ಸಂದರ್ಭದಲ್ಲಿ ಮಸೀದಿ ಖತೀಬರಾಗಿ ಬದಲಿಗೆ ಸೇವೆಯನ್ನು ಮಾಡುತ್ತಿದ್ದರು.
ಜೂ.17 ರಂದು ಮಸೀದಿ ಪರಿಸರದಲ್ಲಿ ಮೃತಪಟ್ಟ ಕೆ.ಪಿ ಅಬ್ದುಲ ರವರ ಮನೆಗೆ ಭೇಟಿಮಾಡಿದ್ದರು.
ಅಲ್ಲಿಂದ ನನಿಗೆ ಸ್ವಲ್ಪ ಎದೆನೋವು ಇದೆ ನಾನು ಬೆಳಿಗ್ಗೆ ಬರುತ್ತೆನೆ ಎಂದು ತಂಬಿನಮಕ್ಕಿ ಮನೆಗೆ ತೆರಳಿದ್ದರು.
ಇವರು ಹಲವಾರು ವರ್ಷಗಳಿಂದ ಬೆಳ್ಳಾರೆಯಲ್ಲಿ ಬುಕ್ ಸ್ಟಾಲ್ ಮತ್ತು ಸುಗಂಧ ದ್ರವ್ಯ ವ್ಯಾಪಾರ ನಡೆಸುತ್ತಿದ್ದರು.
ಇವರು ಕೆಲವು ಮಸೀದಿಗಳ ಗುರುಗಳು ರಜೆಯ ಸಮಯದಲ್ಲಿ ಅವರ ಬದಲಿಗೆ ಕೆಲಸವನ್ನು ಮಾಡುತ್ತಿದ್ದರು.
ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ.