ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ 2022 ಜನವರಿಯಲ್ಲಿ ನಡೆಸಿದ ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮುಡಿಪು ಜವಾಹರ ನವೋದಯ ವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಸಾದ್ವಿ ಎಂ.ಡಿ ಇವರು ಚೆಂಡೆ ವಾದನದಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಈಗಾಗಲೇ ಚೆಂಡೆ ವಾದನದಲ್ಲಿ ಮಿಂಚುತ್ತಿರುವ ಈಕೆ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ, ದೆಹಲಿಯಲ್ಲಿ ನಡೆದ ಕೇಂದ್ರ ನವೋದಯ ವಿದ್ಯಾಲಯ ಸಮಿತಿಯಿಂದ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಪ್ರಥಮ ಸ್ಥಾನದೊಂದಿಗೆ ದೆಹಲಿಯಲ್ಲಿ ನಡೆದ ಎನ್ ಸಿಇಆರ್ ಟಿಯ ರಾಷ್ಟ್ರ ಮಟ್ಟದ ಕಲೋತ್ಸವದಲ್ಲಿ ಭಾಗವಹಿಸಿರುತ್ತಾಳೆ.
ಅನೇಕ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಈಕೆ ಕಲೆ, ಸಾಹಿತ್ಯ, ಕ್ರೀಡೆ, ಬರವಣಿಗೆಯಲ್ಲಿಯೂ ಪ್ರವೀಣೆಯಾಗಿದ್ದಾಳೆ.
ಈಕೆ ಮಾವಾಜಿ ಧರ್ಮಪಾಲ ಮತ್ತು ಸಾವಿತ್ರಿ ಬಿ.ಇವರ ಪುತ್ರಿ.